ಸ್ವದೇಶಿ ತಂತ್ರಜ್ಞಾನದ ಪರಮಾಣು ಕ್ಷಿಪಣಿ ಅಗ್ನಿ-1 ಯಶಸ್ವಿ ಪರೀಕ್ಷೆ

ಸ್ವದೇಶಿ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಳಿಸಿದ ಅಗ್ನಿ-1 ಪರಮಾಣು ಕ್ಷಿಪಣಿಯನ್ನು ಇಂದು ಭಾರತ ಯಶಸ್ವಿಯಾಗಿ ಪ್ರಯೋಗಿಸಿತು. ಒಡಿಶಾದ ಡಾ. ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 8:30 ಗಂಟೆಗೆ ಪರೀಕ್ಷೆ ನಡೆಸಿರುವುದಾಗಿ ರಕ್ಷಣಾ ಇಲಾಖೆ ಹೇಳಿದೆ.

ಆಪರೇಷನ್ ರೆಡಿನೆಸ್ ಗಾಗಿ ಭಾರತೀಯ ಸೇನೆಯ ಸ್ಟ್ರಾಟಜಿಕ್ ಫೋರ್ಸ್ ಕಮ್ಯಾಂಡ್(ಎಸ್.ಎಫ್.ಸಿ) ಅಗ್ನಿ-1 18ನೇ ವರ್ಷನ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ರಕ್ಷಣಾ ಇಲಾಖೆ ವಿವರಿಸಿದೆ.

700 ಕಿ.ಮೀ ವ್ಯಾಪ್ತಿಯಲ್ಲಿನ ಗುರಿಗಳನ್ನು ಅಗ್ನಿ-1 ಮೂಲಕ ಭೇದಿಸಬಹದಾಗಿದ್ದು, ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಅಗ್ನಿ-1 ಕ್ಷಿಪಣಿಯನ್ನು 2004 ರಲ್ಲಿ ಸೇವೆಗೆ ಸೇರ್ಪಡೆಗೊಳಿಸಲಾಯಿತು. ಇದನ್ನು ಬಳಸಿ ಭೂಮಿಯ ಮೇಲಿನ ಗುರಿಗಳನ್ನು ತಲುಪಬಹುದು.

ಅನುಪಮ್ ಖೇರ್ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಪಾಕ್ ಬೆಂಬಲಿತ ಹ್ಯಾಕರ್ಸ್

ಅಗ್ನಿಯ ಈ ಹೊಸ ಆವೃತ್ತಿಯಲ್ಲಿ ಬಳಸಿದ ವಿಶೇಷ ನ್ಯಾವಿಗೇಷನ್ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಿಕೊಂಡ ಗುರಿಯನ್ನು ಯಾವುದೇ ಅನುಮಾನವಿಲ್ಲದೆ ಭೇದಿಸಬಹುದು. ತುರ್ತು ಸಂದರ್ಭಗಳಲ್ಲಿ ಇದನ್ನು ಅತಿ ಕಡಿಮೆ ಸಮಯದಲ್ಲಿಯೇ ಪ್ರಯೋಗಿಸಬಹುದು. 12 ಟನ್ ತೂಕದ ಅಗ್ನಿ-1 ಒಂದು ಸಾವಿರ ಕೆಜಿ ತೂಕದ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು.

Get Latest updates on WhatsApp. Send ‘Subscribe’ to 8550851559