204 ಕ್ಕೆ ಭಾರತ ಆಲೌಟ್

ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡ 204 ರನ್‌ಗಳಿಗೆ ಆಲ್ ಔಟ್ ಆಗಿದೆ. ಇದರಿಂದಾಗಿ ಪ್ರವಾಸಿ ತಂಡಕ್ಕೆ 405 ರನ್ ಗಳ ಗುರಿಯನ್ನು ನೀಡಿದಂತಾಗಿದೆ.

ನಾಲ್ಕನೇ ದಿನವಾದ ಇಂದು 98/3 ರಿಂದ ಇನ್ನಿಂಗ್ಸ್ ಮುಂದುವರೆಸಿದ ಭಾರತ, ಇಂಗ್ಲೆಂಡ್ ಬೌಲರ್ ಗಳ ದಾಳಿಯನ್ನು ಎದುರಿಸಲು ವಿಫಲವಾಯಿತು. ಬ್ರಾಡ್, ರಶೀದ್ ಒಂದರ ಹಿಂದೆ ಒಂದು ವಿಕೆಟ್ ಕಬಳಿಸಿ ಭಾರತ ಚೇತರಿಸಿಕೊಳ್ಳಲು ಅವಕಾಶವೇ ನೀಡಲಿಲ್ಲ. ನಾಯಕ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೂ ಉಳಿದ ಆಟಗಾರರು ಸರಿಯಾದ ಸಾಥ್ ನೀಡಲಿಲ್ಲ. ಕೊನೆ ಗಳಿಗೆಯಲ್ಲಿ ಶಮಿ, ಜಯಂತ್ ರವರ ಆಕರ್ಷಕ ಬ್ಯಾಟಿಂಗ್ ನಿಂದ ಭಾರತ 200 ರ ಗಡಿ ದಾಟಿತು.