2030ರ ವೇಳೆಗೆ ಜಗತ್ತನ್ನು ಆಳುವುದು ಭಾರತವೇ : ಅಮೆರಿಕಾ ರಾಯಭಾರಿ

ಇನ್ನು 14 ವರ್ಷಗಳಲ್ಲಿ ಅಂದರೆ 2030 ರ ವೇಳೆಗೆ ವಿಶ್ವವನ್ನೇ ಆಳುವ ಶಕ್ತಿಯಾಗಿ ಬೆಳೆಯುತ್ತದೆ. ಅ ವೇಳೆಗೆ ಭಾರತದ ಜನಸಂಖ್ಯೆ ಇನ್ನೂ ಹೆಚ್ಚುತ್ತದೆ, ನಗರಗಳು ವಿಸ್ತರಿಸುತ್ತವೆ. ಪದವೀಧರರ ಸಂಖ್ಯೆ ಹೆಚ್ಚುತ್ತದೆ, ಮೂಲಸೌಕರ್ಯಗಳು ಉತ್ತಮವಾಗುತ್ತವೆ. ಹೊಸ ಹೊಸ ಸಂಶೋಧನೆಗಳು ನಡೆಯುತ್ತವೆ, ಪೇಟೆಂಟ್ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತದೆ. ಇದೇ ಕಾರಣಕ್ಕಾಗಿ ಇಂದು ಜಗತ್ತಿನ ದೇಶಗಳೆಲ್ಲಾ ಭಾರತದ ಕಡೆ ಹೆಚ್ಚು ಆಸಕ್ತಿಯಿಂದ ನೋಡುತ್ತಿದ್ದು ಭಾರತದ ಜೊತೆ ಬಲವಾದ ಸಂಬಂಧಗಳನ್ನು ಆಶಿಸುತ್ತಿವೆ ಎಂದು ಅಮೆರಿಕದ ರಿಚರ್ಡ್ ವರ್ಮ ಹೇಳಿದ್ದಾರೆ. ಮಂಗಳವಾರ ಚತ್ತೀಸಗಡದಲ್ಲಿ ಐಐಟಿ, ಐಐಎಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದು, ಇದಕ್ಕೆ ಅಮೆರಿಕಾ ಸಹ ತನ್ನ ಸಹಕಾರ ನೀಡುತ್ತಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಯಾಗಿದ್ದು, ವಾಣಿಜ್ಯ ಸಂಬಂಧಗಳು 100 ಬಿಲಿಯನ್ ಡಾಲರ್ ತಲುಪಿದೆ ಎಂದರು. 1.4 ಲಕ್ಷ ೀಯ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಕಳೆದ ವರ್ಷ 11 ಲಕ್ಷ ವ್ಯಾಸಂಗಕ್ಕೆ ಅಮೆರಿಕಕ್ಕೆ ಹೋಗಿದ್ದರೆ, ಅಷ್ಟೇ ಪ್ರಮಾಣದ ಅಮೆರಿಕನ್ನರು ಭಾರತಕ್ಕೆ ಬಂದರು ಎಂದು ನೆನಪಿಸಿದರು.

ಭಾರತ ಸೂಪರ್ ಪವರ್ ಆಗಿ ಬೆಳೆಯಬೇಕೆಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಯಕೆಯಾಗಿದ್ದು, ಭಾರತದ ಹೆಸರು ಕೇಳಿದಾಗಲೆಲ್ಲಾ ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂದು ವರ್ಮ ಹೇಳಿದರು. ಮುಂದೆ ಭಾರತ ಅಮೆರಿಕಾ ದೇಶಗಳು ಮತ್ತಷ್ಟು ಹತ್ತಿರವಾಗುತ್ತವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದು ಮತ್ತಷ್ಟು ವೇಗವಾಗಿ ನಡೆಯುತ್ತದೆ ಎಂದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache