ಸರಣಿ ಗೆದ್ದ ಟೀಮ್ ಇಂಡಿಯಾ – News Mirchi

ಸರಣಿ ಗೆದ್ದ ಟೀಮ್ ಇಂಡಿಯಾ

ವಿರುದ್ಧದ ನಾಲ್ಕನೇ ಟೆಸ್ಟ್ ಪಂಸ್ಯದಲ್ಲಿ ಭಾರತ ಜಯಗಳಿಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 36 ರನ್ ಗಳ ಅಂತರದಿಂದ ತಂಡವನ್ನು ಮಣಿಸಿತು. ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಟೆಸ್ಟ್ ಉಳಿದಿರುವಂತೆಯೇ ಭಾರತ 3-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.

ಈ ಪಂದ್ಯದ ಐದನೇ ದಿನ ಸೋಮವಾರ 182/6 ಓವರ್ ನೈಟ್ ಸ್ಕೋರ್ ನೊಂದಿಗೆ ಇನ್ನಿಂಗ್ಸ್ ಮುಂದುವರೆಸಿತು. ಭಾರತದ ಬೌಲರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ನ ಆಟ ತುಂಬಾ ಹೊತ್ತು ಸಾಗಲಿಲ್ಲ. ಅಶ್ವಿನ್ ಸತತವಾಗಿ ನಾಲ್ಕು ವಿಕೆಟ್ ಕಬಳಿಸಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 55/3 ಓವರ್ ಗಳಲ್ಲಿ 195 ರನ್ ಗಳಿಗೇ ಆಲೌಟ್ ಆಗಿ, ಭಾರತ ಗೆಲುವು ದಾಖಲಿಸಿತು. ಇಂದಿನ ಆಟದಲ್ಲಿ ಕೇವಲ 8 ಓವರ್ ಗಳಲ್ಲಿಯೇ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡಿತು. ಪಂದ್ಯ ಆರಂಭವಾದ ಸುಮಾರು ಅರ್ಧ ಗಂಟೆಯಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಮುಕ್ತಾಯವಾಯಿತು.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache