ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಕಮಲಾ, ಕೃಷ್ಣಮೂರ್ತಿ ಗೆಲುವು

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ ಮಹಿಳೆ, ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿರುವ ಕಮಲಾ ಹ್ಯಾರಿಸ್ ಇತಿಹಾಸ ಸೃಷ್ಟಿಸಿದ್ದಾರೆ. ಮೊಟ್ಟಮೊದಲ ಭಾರತೀಯ ಅಮೆರಿಕನ್ ಸೆನೆಟರ್ ಆಗಿ ಆಯ್ಕೆಯಾದ ಹಿರಿಮೆಗೆ ಪಾತ್ರರಾದರು.

ಆಡಳಿತ ಪಕ್ಷ ಡೆಮಾಕ್ರಟಿಕ್ ಪಾರ್ಟಿ ಪರ ಸ್ಪರ್ಧಿಸಿದ್ದ ಕಮಲಾ, ತಮ್ಮ ಸಮೀಪ ಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಲೋರೆಟ್ಟಾ ಶ್ಯಾನ್‌ಚೆಜ್ ವಿರುದ್ಧ ಜಯಗಳಿಸಿದರು. ಅಧ್ಯಕ್ಷ ಬರಾಕ್ ಒಬಾಮಾ ಬೆಂಬಲದೊಂದಿಗೆ ಆಕೆ ಕಣಕ್ಕೆ ಇಳಿದಿದ್ದರು. ಕಮಲಾರವರ ತಾಯಿ 1960 ರಲ್ಲಿ ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಗೆ ಸ್ಪರ್ಧಿಸಿದ್ದ ಭಾರತೀಯ ಅಮೆರಿಕನ್ ರಾಜಾ ಕೃಷ್ಣಮೂರ್ತಿ ಗೆಲುವು ಸಾಧಿಸಿದ್ದಾರೆ. ಇಲಿನಾಯ್ ನಿಂದ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಆಯ್ಕೆಯಾಗಿದ್ದಾರೆ.