ಅಮೆರಿಕಾ ವಲಸೆ ಅಧಿಕಾರಿಗಳ ವಶದಲ್ಲಿದ್ದ ಭಾರತೀಯನ ಸಾವು

ನ್ಯೂಯಾರ್ಕ್: ಅಮೆರಿಕಾ ವಲಸೆ ವಿಭಾಗದ ಅಧಿಕಾರಿಗಳ ವಶದಲ್ಲಿದ್ದ ಭಾರತದ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೇ 10 ರಂದು ಈಕ್ವೆಡಾರ್ ನಿಂದ ಅಟ್ಲಾಂಟಾ ಗೆ ಬಂದಿದ್ದ ಅತುಲ್ ಕುಮಾರ್ ಬಾಬುಭಾಯ್ ಪಟೇಲ್ ಎಂಬಾತನನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಗಿತ್ತು. ಇಮಿಗ್ರೇಷನ್ ದಾಖಲೆಗಳು ಸರಿಯಿಲ್ಲವೆಂಬ ಆರೋಪದ ಮೇಲೆ ಪಟೇಲ್ ನನ್ನು ಯು.ಎಸ್ ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ವಿಚಾರಣೆಗಾಗಿ ಪಟೇಲ್ ರನ್ನು ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್ಫೋರ್ಸ್ ಮೆಂಟ್ ಅಧಿಕಾರಿಗಳ ವಶಕ್ಕೆ ನೀಡಲಾಗಿತ್ತು. ಎರಡು ದಿನಗಳ ಕಾಲ ಪಟೇಲ್ ರವರನ್ನು ಅಟ್ಲಾಂಟಾ ಸಿಟಿಯ ಡಿಟೆಕ್ಷನ್ ಸೆಂಟರ್ ನಲ್ಲಿ ಇರಿಸಿಕೊಂಡಿದ್ದರು.

ಪಟೇಲ್ ಗೆ ಮಧುಮೇಹ, ಅಧಿಕ ರಕ್ತದೊತ್ತಡ ಇದ್ದ ಕಾರಣ ಅನಾರೋಗ್ಯಕ್ಕೆ ತುತ್ತಾದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ. ಪಟೇಲ್ ಸಾವಿನ ಕುರಿತು ಪಟೇಲ್ ಕುಟುಂಬಕ್ಕೆ ಮಾಹಿತಿ ನೀಡಿರುವ ಅಮೆರಿಕಾ ವಲಸೆ ವಿಭಾಗದ ಅಧಿಕಾರಿಗಳು, ನಮ್ಮ ವಶದಲ್ಲಿರುವ ವ್ಯಕ್ತಿಗಳು ಸಾವನ್ನಪ್ಪಿರುವುದು ತುಂಬಾ ಅಪರೂಪ ಎಂದು ಪ್ರತಿಕ್ರಿಯಿಸಿದ್ದಾರೆ.

Related News

Comments (wait until it loads)
Loading...
class="clear">