ಐವರು ಪಾಕ್ ಸೈನಿಕರ ಹತ್ಯೆ – News Mirchi

ಐವರು ಪಾಕ್ ಸೈನಿಕರ ಹತ್ಯೆ

ಸರಹದ್ದಿನಲ್ಲಿ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿಗೆ ಪಾಕಿಸ್ತಾನದ ಐವರು ಸೈನಿಕರು ಹತ್ಯೆಯಾಗಿದ್ದಾಗಿ ಭಾರತೀಯ ಸೇನೆ ಪ್ರಕಟಿಸಿದೆ. ಭೀಂಬರ್, ಬಟ್ಟಲ್ ಸೆಕ್ಟಾರ್ ಗಳಲ್ಲಿ ಪಾಕ್ ನಿಂದ ಅಪ್ರಚೋಧಿತ ದಾಳಿ ನಡೆದಿದ್ದರಿಂದ ಪ್ರತಿದಾಳಿ ನಡೆಸಬೇಕಾಗಿ ಬಂದಿತು ಎಂದು ಸೇನೆ ಗುರುವಾರ ಹೇಳಿದೆ. ಪ್ರತಿದಾಳಿಯಲ್ಲಿ ಆರು ಪಾಕ್ ಯೋಧರು ಗಾಯಗೊಂಡಿದ್ದಾಗಿ ತಿಳಿದುಬಂದಿದೆ. ಅದಕ್ಕೂ ಮುನ್ನ ಬೆಳಗ್ಗೆ 7:30ಕ್ಕೆ ಪಾಕ್ ಸೇನೆ ಭಾರತೀಯ ಸೇನೆಯ ಮೇಲೆ ಅಪ್ರಚೋಧಿತ ದಾಳಿ ನಡೆಸಿತು ಎಂದು ಸೇನೆ ಹೇಳಿದೆ.

ಎಲ್ಒಸಿ ಯಲ್ಲಿ ರಾಜೌರಿ, ಪೂಂಚ್ ಜಿಲ್ಲೆಗಳಲ್ಲಿ ಭಾರತೀಯ ಪೋಸ್ಟ್ ಗಳ ಮೇಲೆ ಪಾಕ್ ಮೊರ್ಟಾರ್ ಶೆಲ್ಸ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ ನ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಬಿಎಸ್ಎಫ್ ಯೋಧರು ಗಾಯಗೊಂಡಿದ್ದಾರೆ. ಗುರುವಾರ ನಡೆದ ಮತ್ತೊಂದು ಘಟನೆಯಲ್ಲಿ ಜಮ್ಮೂ ಕಾಶ್ಮೀರದ ಸೊಪೋರ್ ನಲ್ಲಿನ ನಾತೀಪುರಾದಲ್ಲಿನ ನಡೆದ ಭಾರತ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಹತ್ಯೆಯಾಗಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಮತ್ತು ರಾಜ್ಯದ ಪೊಲೀಸರು ಜಂಟಿಯಾಗಿ ಈ ಎನ್ಕೌಂಟರ್ ನಲ್ಲಿ ಭಾಗಿಯಾಗಿದ್ದರು.

ಕಾಶ್ಮೀರದಲ್ಲಿ ಕ್ರಿಯಾಶೀಲವಾಗಿರುವ ಉಗ್ರರ ಪಟ್ಟಿ ಬಿಡುಗಡೆ

ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ 12 ಉಗ್ರರ ಪಟ್ಟಿಯನ್ನು ಭಾರತೀಯ ಸೇನೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಜ್ಬಾರ್ ಅಹ್ಮದ್ ಭಟ್ ನನ್ನು ಭದ್ರತಾಪಡೆಗಳು ತ್ರಾಲ್ ಪ್ರದೇಶದಲ್ಲಿ ಶನಿವಾರದ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ್ದವು. ಲಷ್ಕರೆ ತೊಯ್ಬಾ ನ ಅಬು ದಜಾನ, ಹಿಜ್ಬುಲ್ ನ ರಿಯಾಜ್ ಸೈಕೂ, ಹಿಜ್ಬುಲ್ ನಿಂದ ಹೊರ ಹೋಗಿದ್ದ ಜಕೀರ್ ಮೂಸ ಮುಂತಾದವರ ಹೆಸರುಗಳು ಸೇನೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿವೆ. ಸಬ್ಜಾರ್ ಹತ್ಯೆಯ ನಂತರ ಹಿಜ್ಬುಲ್ ನ ಮುಂದಿನ ಕಮಾಂಡರ್ ಆಗಿ ಸೈಕೂ ನೇಮಕವಾಗಿದ್ದಾಗಿ ಮಾಹಿತಿ ಬಂದಿದೆ. ಇವರೊಂದಿಗೆ ಅಲ್ತಾಫ್ ದಾರ್, ಬಷೀರ್ ವಾನಿ, ಅಬು ಹಾಮಸ್, ಮಹ್ಮದ್ ಯಾಸೀನ್ ಇಟ್ಟೂ, ಜುನೈದ್ ಮಟ್ಟೂ, ಸದ್ದಾಂ ಪದ್ದರ್, ಶೌಖತ್ ತಕ್, ವಸೀಂ, ಜೀನತ್ ಉಲ್ ಇಸ್ಲಾಂ ಹೆಸರುಗಳು ಕೂಡಾ ಪಟ್ಟಿಯಲ್ಲಿವೆ.

Loading...