ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್? – News Mirchi

ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್?

ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ. ಆದರೆ ಈ ಬಾರಿ ನಡೆದಿರುವುದು ನಾಗಾ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಇಂಡೋ-ಮಯನ್ಮಾರ್ ನಿಯಂತ್ರಣ ರೇಖೆಯಲ್ಲಿ ಮಿಂಚಿನ ದಾಳಿ. ಭಾರತೀಯ ಸೇನೆ 70 ಅರೆಸೇನಾ ಪಡೆ ಕಮಾಂಡೋಗಳ ತಂಡ ಬೆಳಿಗ್ಗೆ 4:45 ರ ಸುಮಾರಿಗೆ ಈ ದಾಳಿ ನಡೆಸಿದೆ.

ಲಾಂಖೂ ಗ್ರಾಮದ ಬಳಿ ಇದ್ದ ನಾಗಾ ಉಗ್ರರ ಶಿಬಿರಗಳನ್ನು ನಾಶಪಡಿಸಿದೆ. ಈ ದಾಳಿಗಳಲ್ಲಿ ಎನ್.ಎಸ್.ಸಿ.ಎನ್-ಕೆ ಉಗ್ರ ಸಂಘಟನೆಗೆ ಭಾರೀ ನಷ್ಟವುಂಟಾಗಿದೆ ಎಂದು ಸೇನೆ ಪ್ರಕಟಿಸಿದೆ. ಆದರೆ ಇದು ಸರ್ಜಿಕಲ್ ದಾಳಿ ಎಂಬ ವರದಿಗಳನ್ನು ಸೇನೆ ನಿರಾಕರಿಸಿದೆ.

ನಮ್ಮ ಯೋಧರು ಯಾರೂ ಗಾಯಗೊಂಡಿಲ್ಲ

ಸೇನೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆ ಹೇಳಿದೆ. ಸೇನೆ ದಾಳಿ ನಡೆಸಿದ ಸಂದರ್ಭದಲ್ಲಿ ಕಮಾಂಡೋಗಳು ಅಂತರರಾಷ್ಟ್ರೀಯ ಗಡಿ ದಾಟಿಲ್ಲ ಎಂದು ಸ್ಪಷ್ಟಪಡಿಸಿದೆ. ನಮ್ಮ ಕಮಾಂಡೊಗಳು ಯಾರೂ ಗಾಯಗೊಂಡಿಲ್ಲ, ಯೋಧರ ಮೇಲೆ ನಾಗಾ ಉಗ್ರರು ದಾಳಿಗೆ ಇಳಿದಿದ್ದರಿಂದ ಅವರನ್ನು ಅವರ ಮೇಲೆ ಮಿಂಚಿನ ದಾಳಿ ನಡೆಸಿದ್ದೇವೆ ಎಂದು ಸೇನಾ ಮೂಲಗಳು ಹೇಳಿವೆ.

[ಇದನ್ನೂ ಓದಿ: ಟೆಲಿಕಾಂ ವಲಯ ಐಸಿಯು ದಾಟಿ ಐಸಿಸಿಯು ತಲುಪಿದೆ: ಅನಿಲ್ ಅಂಬಾನಿ]

ಎನ್.ಎಸ್.ಖಪ್ಲಾಂಗ್ ನೇತೃತ್ವದಲ್ಲಿ ರಚನೆಯಾದ ಎನ್.ಎಸ್.ಸಿ.ಎನ್-ಕೆ ಬಂಡುಕೋರ ಗುಂಪು ನಾಗಾಲ್ಯಾಂಡ್ ಮತ್ತು ಮಣಿಪುರಗಳಲ್ಲಿ ನಮ್ಮ ಯೋಧರ ಮೇಲೆ ನಿರಂತರ ದಾಳಿಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಸೇನೆ ಈ ದಾಳಿ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿ ಒಂದು ವರ್ಷ ಪೂರ್ಣಗೊಳ್ಳುವುದರೊಳಗೆ ಇದೀಗ ಅದೇ ರೀತಿಯಲ್ಲಿ ದಾಳಿ ನಡೆಸಿದೆ.

Get Latest updates on WhatsApp. Send ‘Add Me’ to 8550851559

Loading...