ಪಾಕ್ ಜೊತೆ ಕ್ರಿಕೆಟ್‌ಗೆ ನೋ ಎಂದ ಕೇಂದ್ರ – News Mirchi

ಪಾಕ್ ಜೊತೆ ಕ್ರಿಕೆಟ್‌ಗೆ ನೋ ಎಂದ ಕೇಂದ್ರ

ಪಾಕಿಸ್ತಾನದ ಜೊತೆ ತಟಸ್ಥ ಸ್ಥಳದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡುವಂತೆ ಬಿಸಿಸಿಐ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪಾಕಿಸ್ಥಾನದ ಕೋರಿಕೆಯಂತೆ ತಟಸ್ಥ ಸ್ಥಳದಲ್ಲಿ ಆಡಲು ತನ್ನ ಆಕ್ಷೇಪವೇನೂ ಇಲ್ಲ ಎಂದು ಈ ಹಿಂದೆ ಬಿಸಿಸಿಐ ಹೇಳಿತ್ತು. ಇದೀಗ ಪಾಕ್ ನೊಂದಿಗೆ ಕ್ರಿಕೆಟ್ ಆಡಲು ಅನುಮತಿ ನೀಡುವಂತೆ ಬಿಸಿಸಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅನುಮತಿ ನೀಡಿದರೆ ಶೆಡ್ಯೂಲ್ ಪ್ಲಾನ್ ಮಾಡಿಕೊಳ್ಳುತ್ತೇವೆ ಎಂದೂ ಬಿಸಿಸಿಐ ಮನವಿ ಮಾಡಿತ್ತು.

ಆದರೆ ಸದ್ಯದ ಪರಿಸ್ಥಿತಿಗಳು ಎರಡೂ ದೇಶಗಳ ನಡುವಿನ ಕ್ರಿಕೆಟ್ ಕದನಕ್ಕೆ ಸೂಕ್ತವಾಗಿಲ್ಲ ಎಂಬ ಕಾರಣ ನೀಡಿ, ಕೇಂದ್ರ ಸರ್ಕಾರ ಬಿಸಿಸಿಐ ಮನವಿಯನ್ನು ತಿರಸ್ಕರಿಸಿದೆ. ಭಾರತದೊಂದಿಗೆ ಸರಣಿ ಪಂದ್ಯಗಳನ್ನು ಆಯೋಜಿಸಲು ಚರ್ಚಿಸಲು ಎರಡು ವರ್ಷಗಳ ಹಿಂದೆಯೇ ಪಾಕಿಸ್ಥಾನದ ಪಿಸಿಬಿ ಚೇರ್ಮನ್ ಶಹರ್ಯಾರ್ ಖಾನ್ ಭಾರತಕ್ಕೆ ಬಂದಿದ್ದರು. ಆದರೆ ಆತ ಬಿಸಿಸಿಐ ಕಛೇರಿಗೆ ಬಂದ ಸಂದರ್ಭದಲ್ಲಿ ಶಿವಸೇನೆ ಕಾರ್ಯಕರ್ತರು ದಾಂದಲೆ ನಡೆಸಿದ್ದರು. ಹೀಗಾಗಿ ಈ ಪ್ರಸ್ತಾವನೆ ಅಲ್ಲಿಗೆ ಅಂತ್ಯಗೊಂಡಿತು.

Loading...

Leave a Reply

Your email address will not be published.