ಅಬುಧಾಬಿಯಲ್ಲಿ ಭಾರತೀಯನಿಗೆ ಹೊಡೆದ ಜಾಕ್ ಪಾಟ್ – News Mirchi

ಅಬುಧಾಬಿಯಲ್ಲಿ ಭಾರತೀಯನಿಗೆ ಹೊಡೆದ ಜಾಕ್ ಪಾಟ್

ಅಬುಧಾಬಿಯಲ್ಲಿ ಲಾಟರಿಯಲ್ಲಿ ಭಾರತೀಯರೊಬ್ಬರಿಗೆ ಜಾಕ್ ಪಾಟ್ ಹೊಡೆದಿದೆ. ಗುರುವಾರ ನಡೆದ ಮೆಗಾ ರಾಫೆಲ್ ಡ್ರಾದಲ್ಲಿ ಕೇರಳ ಮೂಲದ ಎಂ.ವಿ.ಮ್ಯಾಥ್ಯೂ ಅವರಿಗೆ ಬಂಪರ್ ಪ್ರೈಸ್ ಬಂದಿದೆ. ಸುಮಾರು 12 ಕೋಟಿ ಮೌಲ್ಯದ 1.9 ಮಿಲಿಯನ್ ಡಾಲರ್ ಬಹುಮಾನವಾಗಿ ಗೆದ್ದಿದ್ದಾರೆ.

ಬಿಗ್ ಟಿಕೆಟ್ ಅಬುಧಾಬಿಯಲ್ಲಿ “ಸೂಪರ್ 7 ಸಿರೀಸ್ 183” ಟಿಕೆಟ್ ಖರೀದಿಸಿದ್ದ ಮ್ಯಾಥ್ಯೂ ಬಂಪರ್ ಬಹುಮಾನದ ವಿಜೇತ ಎಂದು ಘೋಷಿಸಲಾಗಿದೆ. 7 ಮಿಲಿಯನ್ ಧಿರಂ ಅಂದರೆ ಸುಮಾರು 1.9 ದಶಲಕ್ಷ ಡಾಲರ್ ಗೆದ್ದಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

ಲಾಟರಿಯಲ್ಲಿ ಕೇವಲ ಮ್ಯಾಥ್ಯೂ ಮಾತ್ರ ಗೆದ್ದಿಲ್ಲ, ಇನ್ನೂ 6 ಭಾರತೀಯರು ಮತ್ತು ಒಬ್ಬರು ಎಮಿರೇಟ್ ವ್ಯಕ್ತಿ ತಲಾ 1 ಲಕ್ಷ ಧಿರಂ ಗೆದ್ದಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ಮತ್ತೊಬ್ಬ ಭಾರತೀಯ ಕೃಷ್ಣಂ ರಾಜು ಎನ್ನುವವರು ಅಬುಧಾಬಿಯಲ್ಲಿ ನಡೆದ ರಾಫೆಲ್ ಡ್ರಾದಲ್ಲಿ 5 ಮಿಲಿಯನ್ ಧಿರಂ(1.3 ಮಿಲಿಯನ್ ಡಾಲರ್) ಗೆದ್ದಿದ್ದರು.

Loading...