ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ಭಾರತೀಯ ಮೂಲದ ವ್ಯಕ್ತಿ |News Mirchi

ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ಭಾರತೀಯ ಮೂಲದ ವ್ಯಕ್ತಿ

ಸಿಂಗಾಪುರದ ಹಂಗಾಮಿ ಅಧ್ಯಕ್ಷರಾಗಿ ಭಾರತೀಯ ಮೂಲದ ಜೆ.ವೈ.ಪಿಳ್ಳೈ ಆಯ್ಕೆಯಾಗಿದ್ದಾರೆ. ಇದೇ ತಿಂಗಳು 23 ರಂದು ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೂ ದೇಶದ ಅಧ್ಯಕ್ಷರಾಗಿ ಅವರು ಮುಂದುವರೆಯುತ್ತಾರೆ. ಸಿಂಗಾಪುರ ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಿದ ಟೋನಿ ಟ್ಯಾನ್ ಕೆಂಗ್ ಯಾಮ್ ರವರಿಂದ ಪಿಳ್ಳೈ ಶುಕ್ರವಾರ ನೂತನ ಜವಾಬ್ದಾರಿ ಸ್ವೀಕರಿಸಿದ್ದಾರೆ. 84 ವರ್ಷದ ಪಿಳ್ಳೈ ಅಧ್ಯಕ್ಷೀಯ ಸಲಹೆಗಾರರ ಮಂಡಳಿ(ಸಿಪಿಎ) ಗೆ ಚೇರ್ಮನ್ ಕೂಡಾ ಆಗಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಟ್ಯಾನ್ ವಿದೇಶಿ ಪ್ರವಾಸಕ್ಕಾಗಿ ಯೂರೋಪ್ ಹೋಗಿದ್ದಾಗಲೂ ಪಿಳ್ಳೈ ಹಂಗಾಮಿ ಅಧ್ಯಕ್ಷರಾಗಿ ಹೊಣೆ ಹೊತ್ತಿದ್ದರು. 2007ರಲ್ಲಿ ಅಂದಿನ ಅಧ್ಯಕ್ಷ ಎಸ್.ಆರ್.ನಾಥನ್ ಆಫ್ರಿಕಾ ಪ್ರವಾಸದ್ಲಲಿದ್ದಾಗಲೂ ಪಿಳ್ಳೈ ಅವರು ಸುಮಾರು 16 ದಿನಗಳ ಕಾಲ ಅಧ್ಯಕ್ಷರಾಗಿ ಮುಂದುವರೆದಿದ್ದರು.

Loading...
loading...
error: Content is protected !!