ಟ್ರಂಪ್ ಕ್ರಮದಿಂದ ಭಾರತೀಯ ಟೆಕ್ಕಿಗಳು ಆತಂಕ ಬೇಕಿಲ್ಲ, ಭಾರತೀಯರನ್ನು ಸ್ವಾಗತಿಸುತ್ತಿದೆ ಕೆನಡಾ…

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ ಆತಂಕದಲ್ಲಿರುವ ಭಾರತದ ಟೆಕ್ಕಿಗಳಿಗೆ ಗುಡ್ ನ್ಯೂಸ್. ಟ್ರಂಪ್ ಕ್ರಮಗಳಿಂದಾಗಿ ಆತಂಕ ಪಡಬೇಡಿ, ನಮ್ಮ ದೇಶಕ್ಕೆ ಬಂದು ತಂತ್ರಜ್ಞಾನ ಸೇವೆಗಳನ್ನು ನೀಡಿ ಎಂದು ಉತ್ತರ ಅಮೆರಿಕದ ಅತಿ ದೊಡ್ಡ ದೇಶ ಕೆನಡಾ ಸ್ವಾಗತಿಸಿದೆ. ಅಷ್ಟೇ ಅಲ್ಲದೆ ಟ್ರಂಪ್ ನಿಷೇಧ ನಂತರ ಕೆನಡಾದಲ್ಲಿ ರೆಕ್ರೂಟ್ಮೆಂಟ್, ಇನ್ವೆಸ್ಟ್ ಮೆಂಟ್ ಭಾರೀ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಆ ದೇಶ ಹೇಳುತ್ತಿದೆ. “ಭಾರತದಿಂದ ಬರುವ ಪ್ರತಿಭಾವಂತರಿಗೆ ಇದು ಸದವಕಾಶ, ಕೆನಡಾದಲ್ಲಿಯೇ ವಾಸಿಸುತ್ತಾ ಕೆನಡಾದಲ್ಲಿ ಉದ್ಯೋಗ ಮಾಡಬಹುದು ಎಂದು ಫ್ಯಾಂಟಸಿ ಸಿಇಒ ಷಾಫಿನ್ ಡೈಮಂಡ್ ತೇಜನಿ ಹೇಳಿದ್ದಾರೆ. ವಾಂಕೋವರ್ ನ ಕಂಪನಿ ವರ್ಚ್ಯುವಲ್ ರಿಯಾಲಿಟಿ, ಅಗ್ಮೆಂಟೆಡ್ ರಿಯಾಲಿಟಿ, ಮಿಕ್ಸೆಡ್ ರಿಯಾಲಿಟಿ ನೆರವಿನೊಂದಿಗೆ ಗೇಮ್ಸ್ ಅಭಿವೃದ್ಧಿಪಡಿಸುತ್ತಿದೆ. ವಾಂಕೋವರ್ ಗೆ ಸ್ವಾಗತಿಸುತ್ತಿರುವ ನಾವು ಭಾರತ ಮತ್ತು ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳ ವಿವರಗಳನ್ನು ಸಂಗ್ರಹಿಸುತ್ತಿರುವುದಾಗಿ ತೇಜನಿ ಹೇಳಿದ್ದಾರೆ.

ಟ್ರಂಪ್ ಜಾರಿ ಮಾಡಿದ ಕಾರ್ಯನಿರ್ವಾಹ ಆದೇಶಗಳಿಂದ ಸಂಕಷ್ಟಕ್ಕೀಡಾಗುವವರಿಗೆ ವೀಸಾ ನೀಡಲು ತಮ್ಮ ದೇಶದ ಪ್ರಧಾನಿಗೆ ಸಹಾ ಪತ್ರ ಬರೆದಿದ್ದಾಗಿ ಕೆನಡಾದ ಟೆಕ್ನಾಲಜಿ ಕಮ್ಯೂನಿಟಿ ಹೇಳುತ್ತಿದೆ. ವಿಶ್ವದಲ್ಲಿ ಇರುವ ಪ್ರತಿಭಾವಂತರನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿ ನೀಡಿ, ಗ್ಲೋಬಲ್ ಕಂಪನಿಗಳನ್ನು ತಮ್ಮ ದೇಶದಲ್ಲಿ ಸ್ಥಾಪಿಸಿ, ತಮ್ಮ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಆಗುವಂತೆ ಮಾಡುತ್ತೇವೆ ಎಂದು ಆ ಪತ್ರದಲ್ಲಿ ಟೆಕ್ ಕಮ್ಯೂನಿಟಿ ಹೇಳಿದೆ. ಅಲ್ಲಿನ ಟಾಪ್ ಸ್ಟಾರ್ಟಪ್ ಇಂಕ್ಯುಬೇಟರ್ ಗಳು ಕೂಡಾ ಭಾರತದ ಟೆಕ್ಕಿಗಳನ್ನು ಕೆನಡಾದಲ್ಲಿ ನೇಮಕ ಮಾಡಿಕೊಳ್ಳಲು ಹೆಚ್ಚು ಒಲವು ಹೊಂದಿವೆ. ಇದೀಗ ಲಾಂಚ್ ಅಕಾಡೆಮಿ ಕೆನಡಿಯನ್ ಸ್ಟಾರ್ಟಪ್ ಒಂದು ವೀಸಾ ಯೋಜನೆಗೆ ಮುಂದಾಗಿದೆ. ಈ ಯೋಜನೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಸ್ಟಾರ್ಟಪ್ ಗಳು ತಮ್ಮ ಪ್ರಧಾನ ಕಛೇರಿಗಳನ್ನು ಕೆನಡಾದಲ್ಲಿ ಸ್ಥಾಪಿಸುವಂತೆ ಅವಕಾಶ ಕಲ್ಪಿಸುತ್ತಿವೆ. ಈ ಯೋಜನೆಯ ಮೂಲಕ ಸ್ಟಾರ್ಟಪ್ ನಲ್ಲಿ ಐದು ಜನ ಪ್ರಮುಖ ವ್ಯಕ್ತಿಗಳಿಗೆ, ಅವರ ಕುಟುಂಬ ಸದಸ್ಯರೊಂದಿಗೆ ಆರು ತಿಂಗಳಲ್ಲಿ ಕೆನಡಾದಲ್ಲಿ ಖಾಯಂ ನಿವಾಸಿಯಾಗಲು ಅನುಮತಿ ನೀಡುತ್ತಿದೆ.