ಸ್ವಾತಂತ್ರ್ಯ ದಿನದಂದು ಭಾರತೀಯ ಪಡೆಗಳತ್ತ ಕಲ್ಲೆಸೆದ ಚೀನಾ – News Mirchi

ಸ್ವಾತಂತ್ರ್ಯ ದಿನದಂದು ಭಾರತೀಯ ಪಡೆಗಳತ್ತ ಕಲ್ಲೆಸೆದ ಚೀನಾ

ನವದೆಹಲಿ: ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಗಡಿಯಲ್ಲಿ ಭಾರತ ಮತ್ತು ಚೀನಾಗಳು ಪ್ರತಿ ವರ್ಷ ವಿಶೇಷ ಸಭೆ ಸೇರುವುದು ಅಭಿನಂದನೆಗಳನ್ನು ತಿಳಿಸುವುದು ಇದುವರೆಗೂ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಚೀನಾ ಆ ಸಾಂಪ್ರದಾಯಿಕ ಭೇಟಿಗೆ ಹಾಜರಾಗದಿದ್ದುದು ಚರ್ಚಾಸ್ಪದವಾಗಿದೆ. ಸಭೆಗೆ ಬರುವಂತೆ ಮಂಗಳವಾರ ಭಾರತೀಯ ಪಡೆಗಳು, ಚೀನಾ ಅಧಿಕಾರಿಗಳಿಗೆ ಫೋನ್ ಮಾಡಿದರೂ ಆ ಕಡೆಯಿಂದ ಪ್ರತಿಕ್ರಿಯೆಯಿಲ್ಲ. ಅಷ್ಟೇ ಅಲ್ಲದೇ ಅದೇ ಸಮಯದಲ್ಲಿ ಚೀನಾ ಭಾರತೀಯ ಯೋಧರ ವಿರುದ್ಧ ಕಲ್ಲಿನ ದಾಳಿಗೆ ಮುಂದಾಗಿದ್ದು ಮತ್ತಷ್ಟು ಉದ್ವಿಘ್ನ ಸ್ಥಿತಿಗೆ ಕಾರಣವಾಗಿದೆ.

ಜಮ್ಮೂ ಕಾಶ್ಮೀರ ಲಡಾಖ್ ವಲಯದಲ್ಲಿ ಪ್ಯಾಂಗ್ಯಾಂಗ್ ಸರೋವರದ ಭಾರತದ ಕಡೆ ಇರುವ ತೀರದ ಕಡೆ ಫಿಂಗರ್ ಫೋರ್, ಫಿಂಗರ್ ಫೈವ್ ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಚೀನಾ ಅತಿಕ್ರಮಣ ಪ್ರವೇಶಕ್ಕೆ ಪ್ರಯತ್ನಿಸಿದ್ದು, ಎಚ್ಚೆತ್ತ ಭಾರತೀಯ ಪಡೆಗಳೂ ತಿರುಗೇಟು ನೀಡಿವೆ. ನಂತರ ಚೀನಾ ಪಡೆಗಳು ಮಾನವ ಸರಪಳಿ ರಚಿಸಿ ಭಾರತೀಯ ಯೋಧರ ಮೇಲೆ ಕಲ್ಲಿನ ದಾಳಿಗೆ ಮುಂದಾಯಿತು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಭಾರತೀಯ ಪಡೆಗಳು ಎಚ್ಚರಿಕೆಯಿಂದ ಇದ್ದುದರಿಂದ ಅವರ ಪ್ರಯತ್ನಗಳು ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ.

ಉಭಯ ದೇಶಗಳ ನಡುವೆ ಭಾರತದ ರಾಷ್ಟ್ರ ಹಬ್ಬದ ಸಂದರ್ಭದಲ್ಲಿ ಗಡಿಯುದ್ದಕ್ಕೂ ಐದು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಸಭೆ ನಡೆಯುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿತ್ತು. ಜಮ್ಮೂ ಕಾಶ್ಮೀರದ ಲಡಾಖ್ ನಲ್ಲಿ ದೌಲತ್ ಬೇಗ್, ಚುಶೂಲ್, ಅರುಣಾಚಲ ಪ್ರದೇಶದ ಕಿಬಿಥೂ, ಬುಮ್ಲಾ, ಸಿಕ್ಕಿಂ ನ ನಾಥೂಲಾ ಬಳಿ ಈ ಭೇಟಿಗಳು ನಡೆಯುತ್ತಿದ್ದವು. ಭಾರತದ ಸ್ವಾತಂತ್ರ್ಯೋತ್ಸವ ದಿನದಂದು ಈ ಐದೂ ಪ್ರದೇಶಗಳಲ್ಲಿ ಎಲ್ಲೂ ಸಭೆ ನಡೆದಿಲ್ಲ ಎಂದು ಭಾರತೀಯ ಸೇನೆ ಪ್ರಕಟಿಸಿದೆ.

Contact for any Electrical Works across Bengaluru

Loading...
error: Content is protected !!