ಪ್ರಧಾನಿಗೆ ಮಹಿಳಾ ಕ್ರಿಕೆಟ್ ತಂಡದ ಉಡುಗೊರೆ – News Mirchi

ಪ್ರಧಾನಿಗೆ ಮಹಿಳಾ ಕ್ರಿಕೆಟ್ ತಂಡದ ಉಡುಗೊರೆ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿತು. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ವರೆಗೂ ಅದ್ಭುತ ಪ್ರದರ್ಶನ ನೀಡಿದ ಮಹಿಳಾ ಕ್ರಿಕೆಟಿಗರ ತಂಡವನ್ನು ಪ್ರಧಾನ ಮಂತ್ರಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಆಟಗಾರ್ತಿಯರ ಸಹಿಗಳುಳ್ಳ ಬ್ಯಾಟ್ ಅನ್ನು ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

ನಂತರ ಮಾತನಾಡಿದ ಪ್ರಧಾನಿ, ದೇಶದ ಜನತೆಯ ಅಭಿಮಾನವನ್ನು ಗಳಿಸಿದ್ದೇ ಭಾರತ ಮಹಿಳಾ ಕ್ರಿಕೆಟ್ ತಂಡ ಸಾಧಿಸಿದ ಅತಿ ದೊಡ್ಡ ಗೆಲುವು ಎಂದು ಬಣ್ಣಿಸಿದರು.

ಏಕದಿನ ವಿಶ್ವಕಪ್ ಫೈನಲ್ ವರೆಗೂ ಉತ್ತಮ ಪ್ರದರ್ಶನ ನೀಡಿದ್ದ ಭಾರತ ವನಿತೆಯರ ತಂಡ, ಫೈನಲ್ ನಲ್ಲಿ ಸೋಲು ಅನುಭವಿಸಿತ್ತು. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ತಂಡಕ್ಕೆ ಶುಭ ಹಾರೈಸಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಗಳನ್ನು ಮಾಡಿದ್ದರು. ಇದನ್ನು ನೆನಪಿಸಿಕೊಂಡ ಮಹಿಳಾ ಕ್ರಿಕೆಟಿಗರು, ಇದೇ ಮೊದಲ ಬಾರಿಗೆ ಒಬ್ಬ ಪ್ರಧಾನಿ ಮಹಿಳಾ ಕ್ರಿಕೆಟ್ ತಂಡಕ್ಕೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದು ಎಂದು ಸಂತಸ ವ್ಯಕ್ತಪಡಿಸಿದರು.

ಅತ್ಯಾಚಾರಕ್ಕೆ ಅತ್ಯಾಚಾರವೇ ಶಿಕ್ಷೆ : ಇದು ಪಾಕಿಸ್ತಾನದ ಗ್ರಾಮವೊಂದರ ತೀರ್ಪು!

ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕ್ರಿಕೆಟಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ಮನಸ್ಸು, ದೇಹ ಮತ್ತು ಕ್ರಿಯೆಗಳ ಸಮತೋಲನಕ್ಕೆ ಯೋಗ ಸಹಕಾರಿಯಾಗುತ್ತದೆ ಎಂದರು.

Loading...