ಸೂಡಾನ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರ ಬಿಡುಗಡೆ

ಇತ್ತೀಚೆಗೆ ಸೂಡಾನ್ ನಲ್ಲಿ ಬಂಡುಕೋರರಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರು, ಭಾರತ ಸರ್ಕಾರದ ಮಧ್ಯಪ್ರವೇಶದಿಂದ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತೀಯರಾದ ಮಿಥುನ್ ಮತ್ತು ಎಡ್ವರ್ಡ್ ಅವರ ಬಿಡುಗಡೆ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಬಿಡುಗಡೆಗೆ ಸೂಡಾನಿನಲ್ಲಿನ ಭಾರತೀಯ ರಾಯಭಾರಿ ಶ್ರೀಕುಮಾರ್ ಮೆನನ್ ಅವರ ಶ್ರಮವನ್ನು ಹೊಗಳಿದರು.

ನಿನ್ನೆ ಸೌದಿಯಲ್ಲಿ ಮಾಲೀಕನ ಬಳಿ ಬಂಧಿಯಾಗಿದ್ದ ತೆಲಂಗಾಣ ಮೂಲದ 29 ಕಾರ್ಮಿಕರನ್ನು ಬಿಡುಗಡೆಗೊಳಿಸಲಾಗಿದ್ದು, ಅವರು ಭಾರತಕ್ಕೆ ವಾಪಸಾಗಲು ವಿಮಾನ ಟಿಕೆಟ್ ‌ಗೆ ಹಣ ಪಾವತಿ ಮಾಡುತ್ತಿರುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದರು.