ಭಾರತದ ಅಗ್ನಿ ಕ್ಷಿಪಣಿಗಳ ಪ್ರಯೋಗಕ್ಕೆ ಚೀನಾ ಮಾಧ್ಯಮ ಅಸಮಾಧಾನ – News Mirchi

ಭಾರತದ ಅಗ್ನಿ ಕ್ಷಿಪಣಿಗಳ ಪ್ರಯೋಗಕ್ಕೆ ಚೀನಾ ಮಾಧ್ಯಮ ಅಸಮಾಧಾನ

ಬೀಜಿಂಗ್: ಅಣ್ವಸ್ತ್ರಗಳು ಮತ್ತು ದೂರ ವ್ಯಾಪ್ತಿ ಕ್ಷಿಪಣಿಗಳ ಅಭಿವೃದ್ಧಿ ವಿಷಯದಲ್ಲಿ ವಿಶ್ವಸಂಸ್ಥೆ ವಿಧಿಸಿರುವ ಮಿತಿಗಳನ್ನು ಭಾರತ ಉಲ್ಲಂಘಿಸಿದೆ ಎಂದು ಚೀನಾ ಆರೋಪಿಸಿದೆ.

ಚೀನಾ ಭೂಭಾಗದ ಪ್ರದೇಶಗಳನ್ನು ತಲುಪಬಲ್ಲ ಅಗ್ನಿ 4 ಮತ್ತು ಐದು ಸಾವಿರ ಕಿಮೀ ವ್ಯಾಪ್ತಿಯ ಅಗ್ನಿ 5 ಕ್ಷಿಪಣಿಗಳನ್ನು ಭಾರತ ಪರೀಕ್ಷೆ ನಡೆಸಿದ್ದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಗ್ನಿ ಕ್ಷಿಪಣಿ ಪರೀಕ್ಷೆಗಳನ್ನು ವಿರೋಧಿಸಿ ಚೀನಾದ ಆಡಳಿತ ಪಕ್ಷದ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಪ್ರಕಟಿಸಿದೆ.

ಭಾರತದ ನಡೆಸುತ್ತಿರುವ ಪರೀಕ್ಷೆಗಳು ಸರಿ ಎಂದಾಗ, ಪಾಕಿಸ್ತಾನಕ್ಕೂ ಅಣ್ವಸ್ತ್ರ ಅಭಿವೃದ್ಧಿ ಮಾಡಲು ಸಮಾನ ಹಕ್ಕುಗಳಿರುತ್ತವೆ, ಅಮೆರಿಕಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೂ ಕೂಡಾ ಈ ವಿಷಯದಲ್ಲಿ ವಿಸ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತಿವೆ. ವಿಶ್ವವೆಲ್ಲಾ ಇದೇ ಧೋರಣೆಯನ್ನು ಅನುಸರಿಸಿದರೆ ಚೀನಾ ಕೂಡಾ ಇದೇ ಕೆಲಸ ಮಾಡುತ್ತದೆ ಎಂದು ಹೇಳಿದೆ. ಇಷ್ಟೆಲ್ಲಾ ಹೇಳಿರುವ ಪತ್ರಿಕೆ, ಭಾರತದ ಅಭಿವೃದ್ಧಿ ನಮಗೆ ಆತಂಕವುಂಟು ಮಾಡುತ್ತದೆ ಎಂದು ನಾವು ಭಾವಿಸಬೇಕಿಲ್ಲ ಎಂದು ಹೇಳಿದೆ.

Loading...

Leave a Reply

Your email address will not be published.