ತೇಲುವ ನಗರದ ಮೇಲೆ ಎಟಿಎಂ – News Mirchi

ತೇಲುವ ನಗರದ ಮೇಲೆ ಎಟಿಎಂ

ಭಾರತೀಯ ನೌಕಾಪಡೆಯ, ತೇಲುವ ನಗರವೆಂದೇ ಕರೆಯಲ್ಪಡುವ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಗೆ ಎಟಿಎಂ ಬರಲಿದೆ. ಸದ್ಯ ಕಾರವಾರ ಪ್ರದೇಶದಲ್ಲಿರುವ ಈ ನೌಕೆಯಲ್ಲಿ ನೌಕಾಪಡೆಯ ಮನವಿಯ ಹಿನ್ನೆಲೆಯಲ್ಲಿ ಎಸ್‌ಬಿ‌‌ಐ ಒಂದು ಎಟಿಎಂ ಸ್ಥಾಪಿಸುತ್ತಿದೆ. ಸ್ಯಾಟಲೈಟ್ ಕಮ್ಯೂನಿಕೇಷನ್ ಲಿಂಕ್ ಮೂಲಕ‌ ಈ ಎಟಿಎಂ ಹಣ ನೀಡುತ್ತದೆ.

ರಷ್ಯಾದಲ್ಲಿ ನಿರ್ಮಾಣವಾದ ಐಎನ್ಎಸ್ ವಿಕ್ರಮಾದಿತ್ಯ ನೌಕೆ 2013 ರಲ್ಲಿ ನೌಕಾ ಪಡೆ ಸೇರಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸುಮಾರು 1600 ಜನ ಇಲ್ಲಿ ಕೆಲಸ ಮಾಡುತ್ತಾರೆ. ಇವರಿಗಾಗಿಯೇ ಪ್ರತಿ ವರ್ಷ ಒಂದು ಲಕ್ಷ ಮೊಟ್ಟೆ, 20 ಸಾವಿರ ಲೀಟರ್ ಹಾಲು, ಸುಮಾರು 16 ಟನ್ ಅಕ್ಕಿ ಮುಂತಾದ ದಿನಸಿ ಖರ್ಚಾಗುತ್ತದೆ.

ಯಾವ ಸಮಯದಲ್ಲಿಯಾದರೂ ತನ್ನ ಅವಶ್ಯಕತೆ ಬರಬಹುದಾದ ಕಾರಣ ನಿರಂತರವಾಗಿ ಇದು ನೀರಿನಲ್ಲೇ ಉಳಿಯುತ್ತದೆ. ನಿರಂತರವಾಗಿ 45 ದಿನಗಳ ಕಾಲ ನೀರಿನಲ್ಲೇ ಇದ್ದರೂ ಅದರಲ್ಲಿರುವವರಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳು ಅಲ್ಲಿ ದಾಸ್ತಾನಿರುತ್ತದೆ. ಇದೀಗ ಅಲ್ಲಿನ ಸಿಬ್ಬಂದಿಗೆ ಹಣದ ಕೊರತೆ ಉಂಟಾಗದಂತೆ ಎಟಿಎಂ ಸ್ಥಾಪಿಸಲಾಗುತ್ತಿದೆ.

Loading...

Leave a Reply

Your email address will not be published.