ಭಾರತದ ಹಜ್ ಕೋಟಾದಲ್ಲಿ 5 ಸಾವಿರ ಹೆಚ್ಚಳ |News Mirchi

ಭಾರತದ ಹಜ್ ಕೋಟಾದಲ್ಲಿ 5 ಸಾವಿರ ಹೆಚ್ಚಳ

ಸೌದಿ ಅರೇಬಿಯವು ಭಾರತದ ಹಜ್ ಕೋಟಾದಲ್ಲಿ 5,000 ಹೆಚ್ಚಳ ಮಾಡಿದ್ದು, ಭಾರತದ ಹಜ್ ಕೋಟಾ ಒಟ್ಟು 1,75,025 ಕ್ಕೇರಿದೆ. ಇದರಿಂದಾಗಿ ಈ ವರ್ಷ ಮತ್ತಷ್ಟು ಜನ ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ. ಕೆಲವು ದಿನಗಳ ಹಿಂದೆ ಸೌದಿ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ವಾರ್ಷಿಕ ಹಜ್ (2018) ಒಪ್ಪಂದಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸಹಿ ಹಾಕಿದ್ದರು.

ಸತತ ಎರಡನೆಯ ವರ್ಷ ಹಜ್ ಕೋಟಾ ಹೆಚ್ಚಳಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಆಡಳಿತ ಹಾಗೂ ವಿಶೇಷವಾಗಿ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರೊಂದಿಗೆ ಹೊಂದಿರುವ ಉತ್ತಮ ಸಂಬಂಧವೇ ಕಾರಣ ಎಂದು ನಖ್ವಿ ಹೇಳಿದ್ದಾರೆ.

ಬೇಕು ಎನಿಸಿದರೆ ಗೋಮಾಂಸ ತಿನ್ನುತ್ತೇನೆ, ಕೇಳಲು ಇವರು ಯಾರು?

ಕಳೆದ ವರ್ಷ 35,000 ದಷ್ಟು ಹಜ್ ಯಾತ್ರೆ ಕೈಗೊಳ್ಳುವ ಭಾರತೀಯರ ಕೋಟಾ ಹೆಚ್ಚಳ ಮಾಡಿದ್ದ ಸೌದಿ ಅರೇಬಿಯಾವು, ಈ ವರ್ಷ ಮತ್ತೆ 5,000 ಹೆಚ್ಚಳ ಮಾಡಿದೆ. ಸೌದಿ ಆಡಳಿತ ಮತ್ತು ಅಲ್ಲಿನ ದೊರೆಯೊಂದಿಗೆ ಪ್ರಧಾನಿ ಮೋದಿಯವರು ಹೊಂದಿರುವ ಸ್ನೇಹ ಸಂಬಂಧವೇ ಈ ಕೋಟಾ ಹೆಚ್ಚಳಕ್ಕೆ ಕಾರಣ ಎಂದು ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

2017 ರಲ್ಲಿ ಭಾರತದ ಹಜ್ ಕೋಟಾ 1,70,025 ರಷ್ಟಿದ್ದು, ಇದರಲ್ಲಿ 1,25,000 ಮಂದಿ ಭಾರತದ ಹಜ್ ಸಮಿತಿಯ ಮೂಲಕ ಯಾತ್ರೆ ಕೈಗೊಂಡಿದ್ದರು. 45,000 ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಹೋಗಿದ್ದರು. ಇದೀಗ ಕೋಟಾ ಹೆಚ್ಚಳವಾಗಿರುವುದರಿಂದ ತಮ್ಮ ಪಾಲಿನ ಕೋಟಾವನ್ನೂ ಹೆಚ್ಚಳ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿದ್ದಾರೆ ಖಾಸಗಿ ಪ್ರವಾಸ ನಿರ್ವಾಹಕರು.

English Summary:  Saudi Arabia has increased India’s Haj quota by 5,000 after Union Minister Mukhtar Abbas Naqvi signed a bilateral annual Haj agreement between India and Saudi Arabia.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!