ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ 2ನೇ ಸ್ಥಾನದಲ್ಲಿ |News Mirchi

ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ 2ನೇ ಸ್ಥಾನದಲ್ಲಿ

ವಾಷಿಂಗ್ಟನ್: ಅಮೆರಿಕಾದಿಂದ 2008-15 ರ ನಡುವಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

2008-15 ರ ನಡುವೆ ಅಮೆರಿಕಾದಿಂದ ಶಸ್ತ್ರಾಸ್ತ್ರ ಖರೀದಿಗಾಗಿ ಭಾರತ 34 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾದೊಂದಿಗೆ 93.5 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡ ಸೌದಿ ಅರೇಬಿಯಾ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸನಲ್ ರಿಸೆರ್ಚ್ ಸರ್ವೀಸ್(ಸಿ.ಆರ್.ಎಸ್) ‘ಅಭಿವೃದ್ಧಿಶೀಲ ದೇಶಗಳ ಸಾಂಪ್ರದಾಯಕ ಶಸ್ತ್ರಾಸ್ತ್ರ ವರ್ಗಾವಣೆ, 2008-15’ ಹೆಸರಿನಲ್ಲಿ ಬಿಡುಗಡೆ ಮಾಡಿದ ವರದಿಯಿಂದ ಈ ವಿವರಗಳು ಲಭ್ಯವಾಗಿವೆ.

ಇದೇ ವರದಿಯಲ್ಲಿನ ಮತ್ತೊಂದು ಪಟ್ಟಿಯ ಪ್ರಕಾರ ವಿಶ್ವಾದ್ಯಂತ 2015ರಲ್ಲಿ ಅಂತರಾಷ್ಟ್ರೀಯವಾಗಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳ ವ್ಯಾಪಾರ ಮಾಡಿದ ದೇಶಗಳ ಪಟ್ಟಿಯಲ್ಲಿ ಅಮೆರಿಕಾ ಪ್ರಥಮ ಸ್ಥಾನದಲ್ಲಿದೆ. 2015ರಲ್ಲಿ 40 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಅಮೆರಿಕಾ ವಿವಿಧ ದೇಶಗಳಿಗೆ ಮಾರಾಟ ಮಾಡಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಫ್ರಾನ್ಸ್ ಇದೆ. ಇದು ಅಮೆರಿಕಾ ಮಾರಿದ ಶಸ್ತ್ರಾಸ್ತ್ರಗಳಲ್ಲಿ ಅರ್ಧದಷ್ಟು ಕೂಡಾ ಮಾರಿಲ್ಲ.

Loading...
loading...
error: Content is protected !!