ಭಾರತದಲ್ಲಿ ಕೆಂಡ ಕಾರುತ್ತಿರುವ ಜ್ವಾಲಾಮುಖಿ – News Mirchi

ಭಾರತದಲ್ಲಿ ಕೆಂಡ ಕಾರುತ್ತಿರುವ ಜ್ವಾಲಾಮುಖಿ

ಭಾರತದಲ್ಲಿರುವ ಏಕೈಕ ಜ್ವಾಲಾಮುಖಿ 150 ವರ್ಷಗಳ ನಂತರ ಮತ್ತೆ ಎಚ್ಚರಗೊಂಡಿದೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ಬಾರೆನ್ ಐಲ್ಯಾಂಡ್ ಜ್ವಾಲಾಮುಖಿ ಸ್ಪೋಟಗೊಂಡಿದೆ ಎಂದು ಗೋವಾದಲ್ಲಿನ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಓಷನೋಗ್ರಫಿ(ಎನ್ಐಒ) ಶುಕ್ರವಾರ ಹೇಳಿದೆ. 1991ರಲ್ಲಿ ಲಾವಾ ಹೊರಚಿಮ್ಮುತ್ತ ಕೊನೆಯದಾಗಿ ಜ್ವಾಲಾಮುಖಿ ಕಾಣಿಸಿಕೊಂಡಿತ್ತು. ಸದ್ಯ ಜ್ವಾಲಾಮುಖಿಯಿಂದ ಭಾರೀ ಪ್ರಮಾಣದಲ್ಲಿ ಹೊಗೆ, ಲಾವಾ ರಸ ಹೊರಬರುತ್ತಿರುವುದಾಗಿ ಹೇಳಿದೆ.

ಕಳೆದ ತಿಂಗಳು 23ರಂದು ಬಾರೆನ್ ಅಗ್ನಿಪರ್ವತವನ್ನು ಪರಿಶೀಲಿಸಲು ವಿಜ್ಞಾನಿಗಳು ಹೋಗಿದ್ದಾಗ, ಒಮ್ಮೆಲೇ ಹೊಗೆ ಹೊರಗೆ ಬರಲು ಶುರುವಾಯಿತು ಎಂದು ಎನ್ಐಒ ಹೇಳಿದೆ. ಹಗಲು ಕೇವಲ ದಟ್ಟ ಹೊಗೆಯನ್ನು ಗಮನಿಸಿದ ವಿಜ್ಞಾನಿಗಳ ತಂಡಕ್ಕೆ, ರಾತ್ರಿಯ ವೇಳೆ ದೊಡ್ಡ ಗಾತ್ರದಲ್ಲಿ ಕೆಂಪಗಿನ ಲಾವಾ ಉಂಡೆಗಳು ಹೊರಬೀಳುತ್ತಿರುವುದಾಗಿ ಗುರುತಿಸಿದ್ದಾರೆ.

Loading...

Leave a Reply

Your email address will not be published.