richest-n-poor-chief-minist

ಶೇ. 81 ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳು, ಆಂಧ್ರ ಸಿಎಂ ಮೊದಲಿಗ, ಮಾಣಿಕ್ ಸರ್ಕಾರ್ ಬಡ ಸಿಎಂ

ಭಾರತದಲ್ಲಿನ ಶೇ.81 ರಷ್ಟು ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಂತೆ. ಹೀಗೆಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿಗಳು ಹೇಳುತ್ತಿವೆ. ವರದಿಯಲ್ಲಿ ಯಾವ್ಯಾವ ಮುಖ್ಯಮಂತ್ರಿಗಳು ಎಷ್ಟು ಪ್ರಮಾಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನೂ ಹೇಳಲಾಗಿದೆ.

chandrababu-naidu

ಚಂದ್ರಬಾಬು ನಾಯ್ಡು

ದೇಶದ ಮುಖ್ಯಮಂತ್ರಿಗಳಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದು, ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅತ್ಯಂತ ಬಡ ಮುಖ್ಯಮಂತ್ರಿ ಎಂದು ವರದಿ ಹೇಳಿದೆ. ಮುಖ್ಯಮಂತ್ರಿಗಳ ಆಸ್ತಿ, ಕ್ರಿಮಿನಲ್ ಪ್ರಕರಣಗಳು ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದಲ್ಲಿ ರ್ಯಾಂಕ್ ನೀಡಲಾಗಿದೆ.

amarinder-singh

ಅಮರಿಂದರ್ ಸಿಂಗ್

 

ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 177 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ನಂತರದ ಸ್ಥಾನಗಳಲ್ಲಿ 129 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮಾ ಖಂಡು, 48 ಕೋಟಿ ರೂಪಾಯಿ ಆಸ್ತಿ ಮೌಲ್ಯದೊಂದಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿದ್ದಾರೆ.

siddaramaiah

ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ 6ನೇ ದೊಡ್ಡ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ 13.61 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದು, ಅದರಲ್ಲಿ 11.22 ಕೋಟಿ ಸ್ಥಿರಾಸ್ತಿ ಮತ್ತು 2.39 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆದರೆ ಕ್ರಿಮಿನಲ್ ಪ್ರಕರಣಗಳ ಕಳಂಕವನ್ನು ಹೊಂದಿರದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು ಎಂದು ವರದಿ ಹೇಳುತ್ತಿದೆ.
ವರದಿಯನ್ನು 29 ರಾಜ್ಯಗಳ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಸಲ್ಲಿಸಿರುವ ಸ್ವತಃ ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಿದೆ.

manik

ಮಾಣಿಕ್ ಸರ್ಕಾರ್

ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಆಸ್ತಿ ಮೌಲ್ಯ ರೂ.26 ಲಕ್ಷದೊಂದಿಗೆ ಅತ್ಯಂತ ಬಡ ಮುಖ್ಯಮಂತ್ರಿಯಾಗಿ ಕೊನೆಯ ಸ್ಥಾನದಲ್ಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತ್ರಿಪುರ ಮುಖ್ಯಮಂತ್ರಿಗಿಂತ ಸ್ವಲ್ಪ ಹೆಚ್ಚಿನ ಆಸ್ತಿಯನ್ನು ಹೊಂದಿದ್ದು, ಅವರ ಆಸ್ತಿ ಮೌಲ್ಯ ರೂ. 30 ಲಕ್ಷ ಎಂದು ಹೇಳಲಾಗಿದೆ.

ಮಮತಾ ಬ್ಯಾನರ್ಜಿ

ಇನ್ನು ಜಮ್ಮೂ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಆಸ್ತಿ ಮೌಲ್ಯ 55 ಲಕ್ಷದೊಂದಿಗೆ 3ನೇ ಬಡ ಮುಖ್ಯಮಂತ್ರಿಯಾಗಿದ್ದಾರೆ. ಕುತೂಹಲಕರ ಸಂಗತಿಯೆಂದರೆ ಮಮತಾ ಬ್ಯಾನರ್ಜಿ ತಮ್ಮ ಅಫಿಡವಿಟ್ ನಲ್ಲಿ ಯಾವುದೇ ಸ್ಥಿರಾಸ್ತಿಯನ್ನು ಘೋಷಿಸಿಲ್ಲ.

ಒಟ್ಟಾರೆ 31 ಮುಖ್ಯಮಂತ್ರಿಗಳಲ್ಲಿ 25 ಜನ ಕೋಟ್ಯಾಧಿಪತಿಗಳಾಗಿದ್ದಾರೆ. ಅವರಲ್ಲಿ 6 ಜನ ಒಂದು ಕೋಟಿಗಿಂತಲೂ ಕಡಿಮೆ ಆಸ್ತಿಯನ್ನು ಹೊಂದಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೇಳಿದ ಸುಬ್ರಮಣ್ಯ ಸ್ವಾಮಿ

ಇನ್ನು 31 ಮುಖ್ಯಮಂತ್ರಿಗಳ ಪೈಕಿ ಶೇ.31 ರಷ್ಟು ಅಂದರೆ 11 ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಹೇಳಿದ್ದಾರೆ. ಅದರಲ್ಲೂ ಶೇ.26 ರಷ್ಟು ಜನರ ಮೇಲೆ ಕೊಲೆ, ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳಿವೆ.

ಇನ್ನು ವಿದ್ಯಾರ್ಹತೆ ವಿಷಯಕ್ಕೆ ಬಂದರೆ ಶೇ.10 ರಷ್ಟು ಜನ 12ನೇ ತರಗತಿ, ಶೇ.39 ರಷ್ಟು ಜನ ಪದವಿ ಪಡೆದಿದ್ದು, ಶೇ.16 ರಷ್ಟು ಜನ ಸ್ನಾತಕೋತ್ತರ ಪದವೀಧರರು.

Get Latest updates on WhatsApp. Send ‘Subscribe’ to 8550851559