ಟಿಡಿಪಿ ಸಂಸದನಿಗೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಂದ ನಿಷೇಧ – News Mirchi

ಟಿಡಿಪಿ ಸಂಸದನಿಗೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಂದ ನಿಷೇಧ

ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ದಬ್ಬಾಳಿಕೆ ಪ್ರದರ್ಶಿಸಿದ ಆಂದ್ರಪ್ರದೇಶದ ಟಿಡಿಪಿ ಸಂಸದ ಜೆ.ಸಿ.ದಿವಾಕರರೆಡ್ಡಿ ಮೇಲೆ ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು ವಿಷೇಧ ವಿಧಿಸಿವೆ. ತಡವಾಗಿ ಬಂದ ತಮ್ಮನ್ನು ಬೋರ್ಡಿಂಗ್ ಗೆ ಅವಕಾಶ ನೀಡಲಿಲ್ಲ ಎಂದು ಇಂಡಿಗೋ ಸಂಸ್ಥೆಯ ಸಿಬ್ಬಂದಿಯ ಮೇಲೆ ಸಂಸದ ಜೆ.ಸಿ.ದಿವಾಕರ ರೆಡ್ಡಿ ದುರ್ವರ್ತನೆ ತೋರಿದ್ದರು. ಈಗಾಗಲೇ ಇಂಡಿಗೋ, ಏರ್ ಇಂಡಿಯಾ ಸ್ಪೈಸ್ ಜೆಟ್ ಸಂಸ್ಥೆಗಳು ದಿವಾಕರ ರೆಡ್ಡಿ ಅವರನ್ನು ತಮ್ಮ ವಿಮಾನಗಳಲ್ಲಿ ಹತ್ತಲು ಬಿಡುವುದಿಲ್ಲ ಎಂದು ಹೇಳಿವೆ. ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ತಾನೇನೂ ಮಾತನಾಡುವುದಿಲ್ಲ, ಹೇಳಲು ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ಸಿಸಿಟಿವಿ ದೃಶ್ಯಾವಳಿಗಳು ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತವೆ ಎಂದರು. ಸಂಸದನಿಗಾದರೂ, ಸಾಮಾನ್ಯನಿಗಾದರೂ ಅಥವಾ ಸ್ವತಃ ನನಗೇ ಆದರೂ ಭದ್ರತಾ ನಿಯಮಗಳು ಒಂದೇ ರೀತಿಯದ್ದಾಗಿರುತ್ತವೆ ಎಂದು ಸಚಿವರು ಹೇಳಿದ್ದಾರೆ.

Loading...