ಜಯಾ ಸಾವು: ಮೂರು ತಿಂಗಳಲ್ಲಿ ವರದಿ – News Mirchi

ಜಯಾ ಸಾವು: ಮೂರು ತಿಂಗಳಲ್ಲಿ ವರದಿ

ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತು ತಮಿಳುನಾಡು ಸರಕಾರ ರಚಿಸಿದ ವಿಚಾರಣಾ ಸಮಿತಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕಳೆದ ವರ್ಷ ಜಯಲಲಿತಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಹಿಡಿದು ಸಾವನ್ನಪ್ಪುವವರೆಗೂ ಆಕೆಗೆ ನೀಡಿದ ಚಿಕಿತ್ಸೆಗಳ ವಿವರಗಳ ಕುರಿತು ವಿಚಾರಣಾ ಸಮಿತಿ ಗಮನ ಹರಿಸಲಿದೆ ಎಂದು ಸರ್ಕಾರ ಹೇಳಿದೆ.

ಎರಡು ಬಣಗಳ ವಿಲೀನಕ್ಕಿದ್ದ ಪ್ರಮುಖ ಷರತ್ತು

ಎಐಎಡಿಎಂಕೆ ಗುಂಪುಗಳ ವಿಲೀನದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಇಟ್ಟ ಪ್ರಮುಖ ಬೇಡಿಕೆ ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುವುದು. ಕಳೆದ ತಿಂಗಳು 21 ರಂದು ಪನ್ನೀರ್ ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಬಣಗಳು ಒಂದಾಗಿದ್ದವು. ಹೀಗಾಗಿ ಪನ್ನೀರ್ ಸೆಲ್ವಂ ಬಣದ ಪ್ರಮುಖ ಬೇಡಿಕೆಯಂತೆ ಜಯಾ ಮರಣದ ಕುರಿತು ತನಿಖೆಗೆ ಸರ್ಕಾರ ನಿರ್ಧರಿಸಿದೆ.

ಜಯಲಲಿತಾ ಅವರ ಸಾವಿನ ಕುರಿತು ಪಕ್ಷದ ಮುಖಂಡರು ಸೇರಿದಂತೆ ಹಲವರು ಶಂಕೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಸಾಮಾಜಿಕ ತಾಣಗಳಲ್ಲಿ ಜಯಾ ಸಾವಿನ ಕುರಿತು ತನಿಖೆ ನಡೆಸುವಂತೆ ನೆಟ್ಟಿಗರು ಸರ್ಕಾರವನ್ನು ಒತ್ತಾಯಿಸಿದ್ದರು.

Get Latest updates on WhatsApp. Send ‘Add Me’ to 8550851559

Loading...