ಆ ಒಂದು ಅವಮಾನಕರ ಪ್ರಶ್ನೆಯೇ ಸರ್ಜಿಕಲ್ ಸ್ಟ್ರೈಕ್ ಗೆ ಕಾರಣವಾಯಿತು |News Mirchi

ಆ ಒಂದು ಅವಮಾನಕರ ಪ್ರಶ್ನೆಯೇ ಸರ್ಜಿಕಲ್ ಸ್ಟ್ರೈಕ್ ಗೆ ಕಾರಣವಾಯಿತು

ಮಯನ್ಮಾರ್ ಗಡಿಯಲ್ಲಿ ಉಗ್ರರನ್ನು ಸದೆಬಡಿದ ನಂತರ ಎದುರಾದ ಆ ಒಂದು ಪ್ರಶ್ನೆಯೇ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಲು ಕಾರಣವಾಯಿತು ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಜೂನ್ 4, 2015 ರಂದು ಈಶಾನ್ಯ ಭಾಗದ ಉಗ್ರರ ಗುಂಪು ಎನ್.ಎಸ್.ಸಿ.ಎನ್-ಕೆ, ಮಣಿಪುರದಲ್ಲಿ ಭಾರತೀಯ ಸೇನೆ ವಾಹನದ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ನಾಲ್ಕು ದಿನಗಳ ನಂತರ ಅಂದರೆ ಜೂನ್ 8 ರಂದು ಮಯನ್ಮಾರ್ ಗಡಿಯಲ್ಲಿ ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 80 ಜನ ಉಗ್ರರು ಸಾವನ್ನಪ್ಪಿದ್ದರು.

  • No items.
[ನಾನು ದೇವರು, ನನ್ನನ್ನು ರಾಷ್ಟ್ರಪತಿ ಮಾಡದಿದ್ದರೆ ದೆಹಲಿ ಸರ್ವನಾಶ]

ಆ ನಂತರ ನಡೆದ ಟಿವಿ ಕಾರ್ಯಕ್ರಮದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೂಡಾ ಅಂತಹ ಕಾರ್ಯಚರಣೆ ನಡೆಸುವ ತಾಕತ್ತು ಭಾರತೀಯ ಸೇನೆಗೆ ಇದೆಯೇ? ಎಂದು ನಿರೂಪಕಿಯೊಬ್ಬಳು ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಕೇಳಿದ್ದರು. ಈ ಪ್ರಶ್ನೆ ನನ್ನನ್ನು ಚಿಂತಿಸುವಂತೆ ಮಾಡಿತ್ತು. 2016 ಸೆಪ್ಟೆಂಬರ್ 29 ರಂದು ಪಾಕ್ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸುವುದಕ್ಕೂ 15 ತಿಂಗಳು ಅಂದರೆ ಜೂನ್ 9, 2015 ರಿಂದಲೇ ಯೋಜನೆ ರೂಪಿಸಿದ್ದೆವು. ಡಿ.ಆರ್.ಡಿ.ಒ ಅಭಿವೃದ್ಧಿಗೊಳಿಸಿ ಅತ್ಯಾಧುನಿಕ ರಾಡಾರ್ ಬಳಸಿ ಪಾಕ್ ಸೇನೆಯ ಫೈರಿಂಗ್ ಯೂನಿಟ್ ಗಳನ್ನು ಪತ್ತೆ ಹಚ್ಚಿ ಧ್ವಂಸಗೊಳಿಸಿದೆವು ಎಂದು ಅವರು ಬಹಿರಂಗಪಡಿಸಿದ್ದಾರೆ.

Loading...
loading...
error: Content is protected !!