ಜೂನ್‌ನಿಂದ ಬೆಂಗಳೂರಿನಲ್ಲೇ ಐಫೋನ್ ತಯಾರಿಕೆ?

***

ಆಪಲ್ ಕಂಪನಿ ತನ್ನ ಐಫೋನ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಸಿದ್ಧವಾಗುತ್ತಿದೆ. ತಯಾರಿಕೆಯ ಆರಂಭ ದಿನ ಇನ್ನೂ ಘೋಷಣೆಯಿಲ್ಲವಾದರೂ, ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಜೂನ್ ತಿಂಗಳಿನಲ್ಲಿ ಆರಂಭವಾಗಬಹುದು.

ಬೆಂಗಳೂರಿನಲ್ಲಿ ಐಫೋನ್ ತಯಾರಿಸುವ ಆಪಲ್ ಸಂಸ್ಥೆಯ ಪ್ರಸ್ತಾವನೆಯನ್ನು ಸ್ವಾಗತಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆಪಲ್ ಸಂಸ್ಥೆಯ ಪ್ರತಿನಿಧಿಗಳು ಕರ್ನಾಟಕ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಐಫೋನ್ ತಯಾರಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಸರ್ಕಾರದ ಜೊತೆ ಸಹಯೋಗ ಕುರಿತಂತೆ ಸಕಾರಾತ್ಮಕ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಸದ್ಯ ಆಪಲ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುವರಿಯಾಗಿ ಶೇ.12.5 ಆಮದು ಸುಂಕ ಪಾವತಿಸಲಾಗುತ್ತಿದೆ. ಇಲ್ಲಿಯೇ ತನ್ನ ಉತ್ಪನ್ನಗಳನ್ನು ತಯಾರಿಸಿದರೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಲು ಸಹಾಯವಾಗುತ್ತದೆ ಎಂಬುದು ಸಂಸ್ಥೆಯ ಚಿಂತನೆ.

ಸದ್ಯ ಐಫೋನ್ ಗಳನ್ನು ಚೀನಾದಿಂದ ಭಾರತಕ್ಕೆ ಕಳುಹಿಸುವ ಫೋಕ್ಸ್‌ಕಾನ್ ಕಂಪನಿ, ನಂತರ ಡಿಸ್ಟ್ರಿಬ್ಯೂಟರ್ ಗಳು, ಐಸ್ಟೋರ್ ಮತ್ತು ರೀಟೇಲ್ ಸ್ಟೋರ್ ಗಳ ಮೂಲಕ ಮಾರುತ್ತಿದೆ.