ಐಪಿಎಲ್ ಹೊಸ ನೀತಿ, ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ವರದಾನ – News Mirchi

ಐಪಿಎಲ್ ಹೊಸ ನೀತಿ, ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ವರದಾನ

ಸ್ಟಾರ್ ಆಟಗಾರರನ್ನು ಹಳೆಯ ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಳ್ಳಲು ಅನುಕೂಲವಾಗುವಂತೆ ಐಪಿಎಲ್ ಆಡಳಿತ ಮಂಡಳಿ ನೂತನ ರಿಟೆನ್ಷನ್ ಪಾಲಿಸಿಯನ್ನು ಜಾರಿಗೆ ತರಲಿದೆ. ಪ್ರತಿ ಫ್ರಾಂಚೈಸಿ ಗರಿಷ್ಟ ಮೂವರು ಆಟಗಾರರನ್ನು ತಮ್ಮಲ್ಲಿ ಉಳಿಸಿಕೊಳ್ಳಬಹುದು. ಇದರಲ್ಲಿ ಒಬ್ಬರು ಭಾರತೀಯ ಆಟಗಾರರಾದರೆ, ಇಬ್ಬರು ವಿದೇಶಿ ಆಟಗಾರರು.

ಈ ಹೊಸ ನಿಯಮದಿಂದ ಧೋನಿ ಮುಂತಾದ ಸ್ಟಾರ್ ಆಟಗಾರರಿಗೆ ಮತ್ತೆ ಚೆನ್ನೈ ಸೂಫರ್ ಕಿಂಗ್ಸ್ ಪರವಾಗಿ ಆಡಲು ಮಾರ್ಗ ಸುಗಮವಾಗುತ್ತದೆ. ಆದರೆ ಈ ಪ್ರಸ್ತಾವನೆಗೆ ಮುಂದಿನ ತಿಂಗಳು ನಡೆಯುವ ಐಪಿಎಲ್ ವರ್ಕ್ ಶಾಪ್ನಲ್ಲಿ ಫ್ರಾಂಚೈಸಿಗಳು ಅನುಮೋದನೆ ನೀಡಬೇಕಿದೆ. ಮಂಗಳವಾರ ಐಪಿಎಲ್ ಆಡಳಿತ ಮಂಡಳಿ(ಜಿಸಿ) ಸಭೆ ನಡೆಸಿದ ನಂತರ ಸಭೆಯಲ್ಲಿ ಪಾಲ್ಗೊಂಡ ಸದಸ್ಯರೊಬ್ಬರು ಮಾತನಾಡುತ್ತಾ, ಪ್ರತಿಯೊಬ್ಬ ಫ್ರಾಂಚೈಸಿ ಗರಿಷ್ಠ ಮೂರು ಆಟಗಾರರನ್ನು ತಮ್ಮ ತಂಡದಲ್ಲಿ ಮುಂದುವರೆಸಬಹುದು. ಇದರಿಂದಾಗಿ ಪುಣೆ, ಗುಜರಾತ್ ತಂಡಗಳಿಗೆ ಆಡಿದ ಆಟಗಾರರು ಪುನಃ ಚೆನ್ನೈ, ರಾಜಸ್ತಾನ್ ರಾಯಲ್ಸ್ ತೆಕ್ಕೆಗೆ ಬರಬಹುದು. ಈ ಕುರಿತು ಮುಂದಿನ ತಿಂಗಳು ಫ್ರಾಂಚೈಸಿ ಮಾಲೀಕರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಈಗಾಗಲೇ ರೈಟ್ ಟು ಮ್ಯಾಚ್(ಆರ್.ಟಿ.ಎಂ) ರೆಟೆನ್ಷನ್ ನೀತಿ ಇರುವುದರಿಂದ ಅಂತಿಮವಾಗಿ ಎಷ್ಟು ಜನರನ್ನು ಉಳಿಸಿಕೊಳ್ಳಬಹುದು ಎಂಬ ಪ್ರಶ್ನೆಗೆ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಉತ್ತರಿಸುತ್ತಾ, ಫ್ರಾಂಚೈಸಿಗಳ ಅಂಗೀಕಾರದೊಂದಿಗೆ ಮೂರರಿಂದ ಐದು ಆಟಗಾರರಿರುವ ಸಾಧ್ಯತೆಗಳಿವೆ ಎಂದರು. ಆಟಗಾರರ ಖರೀದಿಗಾಗಿ ಈಗ ಪ್ರತಿ ಫ್ರಾಂಚೈಸಿ ಈಗ ರೂ.60 ಕೋಟಿ ವೆಚ್ಚ ಮಾಡುತ್ತಿದ್ದು, ಈ ಮೊತ್ತವನ್ನು ರೂ.75 ಕೋಟಿಗೆ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ವಿವಾದಿತ ರೀತಿಯಲ್ಲಿ ಅಮಾನತಿಗೆ ಗುರಿಯಾದ ಕೊಚ್ಚ ಟಸ್ಕರ್ಸ್ ಕೇರಳ ತಂಡಕ್ಕೆ ಬೃಹತ್ ಮೊತ್ತದ ನಷ್ಟ ಪರಿಹಾರ ನೀಡಲು ಬಿಸಿಸಿಐ ಸಿದ್ಧವಾಗಿದೆ. ಒಟ್ಟಾರೆ ರೂ.800 ಕೋಟಿ ಗೂ ಹೆಚ್ಚು ಮೊತ್ತವನ್ನು ಪಾವತಿ ಮಾಡಲಿದೆ ಎಂದು ಐಪಿಎಲ್ ಮೂಲಗಳು ಹೇಳಿವೆ. 2015 ರಲ್ಲಿಯೇ ಆರ್ಬಿಟ್ರೇಷನ್ ಕೋರ್ಟ್ ನಲ್ಲಿ ಕೊಚ್ಚಿ ತಂಡಕ್ಕೆ ಅನುಕೂಲವಾಗಿ ತೀರ್ಪು ಬಂದಿದೆ. ಆಗಲೇ ರೂ.550 ಕೋಟಿಯನ್ನು ಶೇ.18 ದಂಡದೊಂದಿಗೆ ನೀಡಬೇಕು ಎಂದು ಹೇಳಿತ್ತು. ಹೀಗಾಗಿ ಈಗ ಅದು ಇಷ್ಟು ಬೃಹತ್ ಮೊತ್ತಕ್ಕೆ ತಲುಪಿದೆ. ಸುಪ್ರೀಂ ಕೋರ್ಟಿಗೆ ಹೋದರೂ ಲಾಭವಿಲ್ಲವೆಂದು ಕೊಚ್ಚಿ ತಂಡದೊಂಗೆ ಚರ್ಚೆ ನಡೆಸಿದ ನಂತರ ಈ ಮೊತ್ತ ಕುರಿತು ಒಂದು ಸ್ಪಷ್ಟತೆ ಸಿಗಲಿದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...