ಇಸ್ಲಾಮಿಕ್ಸ್ ಸ್ಟೇಟ್ಸ್ ಉಗ್ರರಿಗೆ ಭಾರೀ ಹಿನ್ನಡೆ, ಕೈತಪ್ಪಿದ ಮೊಸೂಲ್ ನಗರ |News Mirchi

ಇಸ್ಲಾಮಿಕ್ಸ್ ಸ್ಟೇಟ್ಸ್ ಉಗ್ರರಿಗೆ ಭಾರೀ ಹಿನ್ನಡೆ, ಕೈತಪ್ಪಿದ ಮೊಸೂಲ್ ನಗರ

ಇಸ್ಲಾಮಿಕ್ ಸ್ಟೇಟ್ಸ್ ಹಿಡಿತದಲ್ಲಿದ್ದ ಮೊಸೂಲ್ ನಗರವನ್ನು ಇರಾಕ್ ಮರುವಶಪಡಿಸಿಕೊಂಡಿದೆ. ಈ ಕುರಿತು ಘೋಷಣೆ ಮಾಡಿರುವ ಇರಾಕ್ ಪ್ರಧಾನಿ ಹೈದರ್ ಅಲ್-ಅಬಾದಿ, ಉಗ್ರರ ವಿರುದ್ಧ ಸಿಕ್ಕ ಯಶಸ್ಸಿಗೆ ಜನತೆ ಮತ್ತು ಯೋಧರನ್ನು ಅಭಿನಂದಿಸಿದ್ದಾರೆ.

ಮೂರು ವರ್ಷಗಳಿಂದ ಇಸ್ಲಾಮಿಕ್ಸ್ ಸ್ಟೇಟ್ಸ್ ಉಗ್ರರ ಹಿಡಿತದಲ್ಲಿದ್ದ ಮೊಸೂಲ್ ನಲ್ಲಿ ಸಾವಿರಾರು ನಾಗರಿಕರು ಹತ್ಯೆಯಾಗಿದ್ದರು. ಲಕ್ಷಾಂತರ ಜನ ನಗರ ಬಿಟ್ಟು ಹೋಗಿದ್ದರು.

ಮೊಸೂಲ್ ಅನ್ನು ಮರುವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ 30ಕ್ಕೂ ಹೆಚ್ಚು ಉಗ್ರರರು ನಗರವನ್ನು ವಿಭಜಿಸುವ ನದಿಯಲ್ಲಿ ಈಜಿ ಪರಾರಿಯಾಗುವ ಪ್ರಯತ್ನ ನಡೆಸಿದ್ದರು. ಈ ವೇಳೆ ಇರಾಕ್ ಸೇನೆ ಉಗ್ರರನ್ನು ಕೊಂದು ಹಾಕಿದೆ ಎಂದು ಇರಾಕ್ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ರಸೂಲ್ ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಅಂತಾರಾಷ್ಟ್ರೀಯ ಒಕ್ಕೂಟದ ಸೇನೆಗಳು ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಉಗ್ರರ ಪಡೆಗಳ ಮೇಲೆ ವಾಯು ದಾಳಿ ನಡೆಸುತ್ತಾ ಬೆಂಬಲಿಸಿದ್ದವು.

ಇನ್ನು ಮಮತಾ ಸರ್ಕಾರದೊಂದಿಗೆ ಚರ್ಚೆಯ ಮಾತೇ ಇಲ್ಲ

ಐಎಸ್ಐಎಸ್(ಇಸ್ಲಾಮಿಕ್ ಸ್ಟೇಟ್ಸ್) ಉಗ್ರರ ಹಿಡಿತದಲ್ಲಿದ್ದ ನಗರಗಳಲ್ಲಿಯೇ ಮೊಸೂಲ್ ಅತಿ ದೊಡ್ಡ ನಗರವಾಗಿತ್ತು. ಇದೀಗ ಅದೂ ಇರಾಕ್ ಸರ್ಕಾರದ ವಶವಾಗಿದ್ದು, ಈಗ ಐಸಿಸ್ ಉಗ್ರರ ಹಿಡಿತ ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ, ಮತ್ತು ಸಾವಿರಾರು ಜನ ವಾಸಿಸುವ ಮರಳುಗಾಡಿನ ಪ್ರದೇಶಳಿಗೆ ಸೀಮಿತವಾಗಿದೆ.

Loading...
loading...
error: Content is protected !!