38 ಉಗ್ರರನ್ನು ಒಂದೇ ದಿನ ಸಾಮೂಹಿಕವಾಗಿ ನೇಣಿಗೇರಿಸಿದ ಇರಾಕ್ |News Mirchi

38 ಉಗ್ರರನ್ನು ಒಂದೇ ದಿನ ಸಾಮೂಹಿಕವಾಗಿ ನೇಣಿಗೇರಿಸಿದ ಇರಾಕ್

ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಮತ್ತು ಅಲ್ ಖೈದಾಗೆ ಸೇರಿದ 38 ಸುನ್ನಿ ಮುಸ್ಲಿಂ ಉಗ್ರರನ್ನು ಭಯೋತ್ಪಾದನೆಯ ಆರೋಪದ ಮೇಲೆ ನೇಣಿಗೇರಿಸಿರುವುದಾಗಿ ಇರಾಕ್ ಸರ್ಕಾರ ಹೇಳಿದೆ. ದಕ್ಷಿಣ ನಸ್ಸೀರಿಯಾದ ಕಾರಾಗೃಹದಲ್ಲಿ ಸಾಮೂಹಿಕವಾಗಿ ಮರಣದಂಡನೆ ಜಾರಿ ಮಾಡಲಾಯಿತು ಎಂದು ಆ ದೇಶದ ಸರ್ಕಾರದ ಪ್ರಕಟಣೆ ಹೇಳಿದೆ.

ಸೆಪ್ಟೆಂಬರ್ 24 ರಂದು 42 ಉಗ್ರರನ್ನು ಇದೇ ಕಾರಾಗೃಹದಲ್ಲಿ ನೇಣಿಗೇರಿಸಲಾಗಿತ್ತು. ಈ ಸಂದರ್ಭದಲ್ಲಿ ಇರಾಕ್ ಸರ್ಕಾರ ಜಾರಿ ಮಾಡಿದ ಸಾಮೂಹಿಕ ಮರಣದಂಡನೆಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿತ್ತು. ಇದರ ನಂತರ ಒಂದೇ ದಿನದಲ್ಲಿ ಇಷ್ಟೊಂದು ಜನರನ್ನು ಸಾಮೂಹಿಕವಾಗಿ ನೇಣಿಗೇರಿಸಿರುವುದು ಇದೇ ಮೊದಲು.

  • No items.

ಎಲ್ಲಾ ಖೈದಿಗಳು ಅವರಿಗೆ ಲಭ್ಯವಿರುವ ಮೇಲ್ಮನವಿ ಆಯ್ಕೆಗಳನ್ನು ಕಳೆದುಕೊಂಡಿದ್ದಾರೆ. ನೇಣಿಗೇರಿಸಲಾಗಿರುವ ಎಲ್ಲಾ ಉಗ್ರರು ಇರಾಖ್ ಪೌರರಾಗಿದ್ದು, ಒಬ್ಬರು ಮಾತ್ರ ಸ್ವೀಡನ್ ಪೌರತ್ವವನ್ನು ಹೊಂದಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ ನೇತೃತ್ವದ ಮೈತ್ರಿಕೂಟದ ನೆರವಿನಿಂದ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರ ವಿರುದ್ಧ ಮೂರು ವರ್ಷಗಳ ಕಾಲ ನಡೆಸಿದ ಕಾರ್ಯಚರಣೆ ಬಳಿಕ ಗೆಲುವು ಸಾಧಿಸಿದ್ದೇವೆ ಎಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಶನಿವಾರ ಘೋಷಿಸಿದ್ದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!