ಕರಣ್ “ಗೇ” ಅಂತ ಒಪ್ಪಿಕೊಂಡರಾ?

ಬಾಲಿವುಡ್ ಟಾಪ್ ನಿರ್ದೇಶಕರಲ್ಲಿ ಕರಣ್ ಜೋಹರ್ ಒಬ್ಬರು. ಇದುವರೆಗೂ ಆತನಿಂದ ಹಲವು ಉತ್ತಮ ಚಿತ್ರಗಳು ಮೂಡಿ ಬಂದಿವೆ. ಆತನ ಲೈಂಗಿಕ ದೃಷ್ಟಿಕೋನದ ಕುರಿತೂ ಈಗ ಹಲವು ಸುದ್ದಿಗಳು ಹರಿದಾಡುತ್ತಿವೆ.

ಕೆಲವರು ಕರಣ್ ಜೋಹಾರ್ ಒಬ್ಬ ‘ಗೇ’, ಆತ ಗಂಡಸರೊಂದಿಗೆ ಮಾತ್ರ ಸಂಬಂಧ ಬೆಳೆಸುತ್ತಾರೆ ಎಂಬ ವದಂತಿಗಳು ಬಾಲಿವುಡ್ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಾಗುತ್ತಿವೆ. ಈ ಸುದ್ದಿಗಳಲ್ಲಿ ಸತ್ಯ ಇದೆ ಎಂದು ನಂಬುವವರ ಸಂಖ್ಯೆಯೇ ದೊಡ್ಡದು. ಒಂದು ಕಾಲದಲ್ಲಿ ಕರಣ್, ಶಾರೂಖ್ ಖಾನ್ ಸಾರ್ವಜನಿಕವಾಗಿ ಮುತ್ತು ಕೊಟ್ಟಿದ್ದು ಕೂಡಾ ಈ ಸುದ್ದಿಗಳಿಗೆ ಬಲ ತುಂಬಿದೆ.

ಇತ್ತೀಚೆಗೆ ಲೇಖಕರ ಸಹಾಯದಿಂದ ಕರಣ್ ಬಯೋಗ್ರಫಿಯನ್ನು ಬರೆಸಿದ್ದಾರೆ. ಶೀಘ್ರದಲ್ಲೇ ಅದು ಬಿಡುಗಡೆಯಾಗಲಿದೆ. ಅದರಲ್ಲಿ, ತನ್ನ ಲೈಂಗಿಕ ದೃಷ್ಟಿಕೋನಗಳ ಕುರಿತು ಹಲವು ವಿಷಯಗಳನ್ನು ಕರಣ್ ಹೇಳಿದ್ದಾರಂತೆ. ಅದಕ್ಕೆ ಸಂಬಂಧಿಸಿದ ಕೆಲ ವಿಷಯಗಳು ಲೀಕ್ ಆಗಿವೆ ಎನ್ನಲಾಗುತ್ತಿದ್ದು, ಅವು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಆ ಬಯೋಗ್ರಫಿಯಲ್ಲಿ ತಾನೊಬ್ಬ ಸಲಿಂಗಕಾಮಿ ಎಂದು ನೇರವಾಗಿ ಹೇಳದೆಯೇ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿ ವೆ. ತಮ್ಮ 26 ನೇ ವರ್ಷದಲ್ಲಿ ನ್ಯೂಯಾರ್ಕ್ ನಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದಾಗಿ ಕರಣ್ ಹೇಳಿದ್ದಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸುದ್ದಿಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಸಿಗಬೇಕೆಂದರೆ ಆ ಬಯೋಗ್ರಫಿ ಬಿಡುಗಡೆಯಾಗಬೇಕು ಅಷ್ಟೇ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache