ಪರಾರಿಯಾಗಲು ಯತ್ನಿಸಿದ ತನ್ನದೇ ಸಂಘಟನೆಯ ಉಗ್ರರ ತಲೆ ಕಡಿದ ಐಎಸ್ ಸಂಘಟನೆ

ಸಂಘಟನೆಯ ಪರ ಹೋರಾಟ ಮಾಡದೆ ಪರಾರಿಯಾಗಲು ಯತ್ನಿಸಿದ ಮೂವರು ಉಗ್ರರನ್ನು ಅ ಸಂಘಟನೆ ಬಹಿರಂಗವಾಗಿ ತಲೆ ಕಡಿದು ಶಿಕ್ಷಿಸಿದೆ. ಡೇರ್ ಏಜ್ ಪ್ರದೇಶ ಕೆಲ ಕಾಲದಿಂದ ಉಗ್ರರ ಅಧೀನದಲ್ಲಿದೆ.

ಒಂದು ಕಡೆ ಸರ್ಕಾರ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ಐಎಸ್ ಸಂಘಟನೆಯ ಬಂಡುಕೋರರು ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಪರ ಯುದ್ಧ ಮಾಡದೆ ಪರಾರಿಯಾಗುವವರ ಮೇಲೆ ಸಂಘಟನೆ ತೀವ್ರ ನಿಘಾ ಇಟ್ಟಿತ್ತು.

ಹೀಗೆ ಪರಾರಿಯಾಗಲು ಯತ್ನಿಸಿದ ಮೂವರು ಉಗ್ರರನ್ನು ಇಸ್ಲಾಮಿಕ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಸಾರ್ವಜನಿಕವಾಗಿ ಆ ಮೂವರ ತಲೆ ಕಡಿಯುವಂತೆ ಕೋರ್ಟ್ ಆದೇಶ ನೀಡಿತು. ತೀರ್ಪಿನ ಪ್ರಕಾರ ನಗರ ಪ್ರದೇಶದಲ್ಲಿ ನೂರಾರು ಜನರು ನೋಡುತ್ತಿರುವಂತೆ ಸಾರ್ವಜನಿಕವಾಗಿ ಮೂವರ ತಲೆ ಕಡಿಯಲಾಯಿತು.

Related News

loading...
error: Content is protected !!