ಭಯೋತ್ಪಾದಕನಿಗೆ ಸ್ಕಾಲರ್ಶಿಪ್ ನೀಡಿದ ಜಾಕೀರ್ ನಾಯಕ್ – News Mirchi

ಭಯೋತ್ಪಾದಕನಿಗೆ ಸ್ಕಾಲರ್ಶಿಪ್ ನೀಡಿದ ಜಾಕೀರ್ ನಾಯಕ್

ವಿವಾದಿತ ಇಸ್ಲಾಮಿಕ್ ಧರ್ಮ ಪ್ರಚಾರಕ ಜಾಕೀರ್ ನಾಯಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಆತ ನಡೆಸುತ್ತಿದ್ದ ಎನ್.ಜಿ.ಒ ಸಂಸ್ಥೆಗಳ ಮೇಲೆ ರಾಷ್ಟ್ರೀಯ ತನಿಖಾ ತಂಡ ದಾಳಿ ನಡೆಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಜಾಕೀರ್ ನಾಯಕ್ ಗೆ ಇಸ್ಲಾಮಿ ರಿಸರ್ಚ್ ಫೌಂಡೇಷನ್(ಐ.ಆರ್.ಎಫ್) ಎಂಬ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ) ಇರುವುದು ನಮಗೆಲ್ಲಾ ತಿಳಿದಿದೆ. ಇದರಿಂದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗೆ ಸೇರಿದ ಅಬೂ ಅನಾಸ್ ಎಂಬ ವ್ಯಕ್ತಿಗೆ ರೂ. 80,000 ಸ್ಕಾಲರ್ಶಿಪ್ ನೀಡಿರುವುದು ದೃಢಪಟ್ಟಿದೆ.

ಅನಾಸ್ ಎಂಬಾತ ಸಿರಿಯಾಗೆ ಹೋಗಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಯೋಜನೆ ರೂಪಿಸಿದ್ದ. ಆ ಸಮಯದಲ್ಲಿ ಆತ ರಾಜಸ್ಥಾನ ಟೋಂಕ್ ನಲ್ಲಿನ ಐಸಿಐಸಿಐ ಬ್ಯಾಂಕ್ ನಲ್ಲಿ ಹೊಂದಿದ್ದ ಖಾತೆಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಎನ್.ಜಿ.ಒ ನಿಂದ ಹಣ ಜಮೆಯಾಗಿದೆ ಎಂದು ಎನ್.ಐ.ಎ ಸ್ಪಷ್ಟಪಡಿಸಿದೆ. ತನಗೆ ಸ್ಕಾಲರ್ಶಿಪ್ ನೀಡಬೇಕೆಂದು ಮೊದಲು ವೆಬ್ಸೈಟ್ ಮೂಲಕ ಅರ್ಜಿ ಹಾಕಿದ್ದ ಅನಾಸ್ ನನ್ನು, ಮುಂಬಯಿಗೆ ಕರೆದು ಸಂದರ್ಶನ ನಡೆಸಿ ಜಾಕೀರ್ ನಾಯಕ್ ಎನ್.ಜಿ.ಒ ಹಣ ಮಂಜೂರು ಮಾಡಿತ್ತು.

ಐಸಿಸ್ ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಭಾರತದ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದ ಅನಾಸ್ ನನ್ನು ಇದೇ ವರ್ಷದ ಜನವರಿಯಲ್ಲಿ ಪೊಲೀಸರು ಬಂಧಿಸಿದ್ದರು. ಆತ ಹೇಳಿದ ಮಾಹಿತಿಯ ಆಧಾರದ ಮೇಲೆ ಇದೀಗ ಮತ್ತೆ ಜಾಕೀರ್ ನಾಯಕ್ ಗೆ ಸೆರಿದ ಎನ್.ಜಿ.ಒ ಆದ ಐಆರ್ಎಫ್ ಮೇಲೆ ದಾಳಿ ನಡೆಸಿದ್ದಾರೆ.

Loading...

Leave a Reply

Your email address will not be published.