ಕುಲಭೂಷಣ್ ಜಾದವ್ ಗೆ ಗಲ್ಲು: ಮುಷರಫ್ ಸಂದರ್ಶನ – News Mirchi

ಕುಲಭೂಷಣ್ ಜಾದವ್ ಗೆ ಗಲ್ಲು: ಮುಷರಫ್ ಸಂದರ್ಶನ

ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಮರ್ಥಿಸಿಕೊಂಡಿದ್ದಾರೆ. ಕುಲಭೂಷಣ್ ಗೂಢಚಾರಿಕೆಯಲ್ಲಿ ತೊಡಗಿರುವುದಕ್ಕೆ ಐಎಸ್ಐ ಬಳಿ ಸಾಕ್ಷಿ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಷರಫ್, ವಾಷಿಂಗ್ಟನ್ ನಲ್ಲಿ ಕೂತು ಐಎಸ್ಐ ಬಳಿ ಏನೆಲ್ಲಾ ಸಾಕ್ಷಿ ಇದೆ ಎಂದು ಖಚಿತವಾಗಿ ಹೇಳಲಾರೆ. ಆದರೆ ಐಎಸ್ಐ ಸೂಕ್ತ ಸಾಕ್ಷಿ ಹೊಂದಿರುತ್ತದೆ ಎಂದು ಹೇಳಿರುವ ಅವರು, ಈಗ ಐಎಸ್ಐ ಯಾವುದೇ ಸಾಕ್ಷಿಯನ್ನು ಭಾರತದೊಂದಿಗೆ ಹಂಚಿಕೊಳ್ಳದೆ ಇರಬಹುದು, ಆದರೆ ಮುಂದಿನ ದಿನಗಳಲ್ಲಿ ಆರೋಪಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತವಾಗಿ ಹಂಚಿಕೊಳ್ಳಲಿದ್ದಾರೆ ಎಂದರು.

ಕುಲಭೂಷಣ್ ಜಾದವ್ ಒಬ್ಬ ನಿವೃತ್ತ ನೌಕಾಪಡೆಯ ಅಧಿಕಾರಿ, ಆತ “ರಾ” ಏಜೆಂಟ್ ಅಲ್ಲ ಎಂಬ ಭಾರತದ ಹೇಳಿಕೆಯನ್ನು ಅಲ್ಲಗೆಳೆದಿರುವ ಮುಷರಫ್, ಕುಲಭೂಷಣ್ ನಿವೃತ್ತರಾಗಿರಲಿಲ್ಲ, ಬದಲಿಗೆ ಅವರು ಭಾರತದ ಗುಪ್ತಚರ ಸಂಸ್ಥೆ “ರಾ” ಗೆ ಸೇರಿದ್ದರು ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹದಗೆಟ್ಟಿರುವ ಸಂಬಂಧಕ್ಕೆ ಭಾರತ ಕಾರಣ, ನಿಮ್ಮ ಭಾರತದ ಪ್ರಧಾನಿ, ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು ಕಾರಣ ಎಂದು ಆರೋಪಿಸಿದ್ದಾರೆ.

Loading...