ಯೋಗಿ ಆದಿತ್ಯನಾಥರಿಗೆ ಐಸಿಸ್ ಉಗ್ರರ ಹೆಸರಲ್ಲಿ ಬೆದರಿಕೆ ಪತ್ರ?

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿ ಇನ್ನೂ ಹತ್ತು ದಿನ ಕಳೆದಿಲ್ಲ, ಅಷ್ಟರೊಳಗೆ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಎಚ್ಚರಿಕೆ ನೀಡುತ್ತಾ ಪತ್ರ ಬಂದಿರುವುದು ಆತಂಕ ಸೃಷ್ಟಿಸಿದೆ. ಯೋಗಿ ಆದಿತ್ಯನಾಥ್ ಅವರಿಗೆ ಧೈರ್ಯವಿದ್ದರೆ ನಾಡಿದ್ದು ಪೂರ್ವಾಂಚಲದಲ್ಲಿ ನಡೆಯುವ ಹಿಂಸೆಯನ್ನು ತಡೆಯಲಿ ಎಂದು ಆ ಪತ್ರದಲ್ಲಿದೆ.

ಈ ಪತ್ರವನ್ನು ಪೊಲೀಸರು ವಾರಣಾಸಿಯ ಮಿರ್ಜಾಮುರಾದ್ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದೂ ಆ ಪತ್ರದಲ್ಲಿ ಬರೆಯಲಾಗಿರುವ ಪತ್ರದಲ್ಲಿ, ಮಾರ್ಚ್ 24 ರಂದು ಪೂರ್ವಾಂಚಲದಲ್ಲಿ ಹಿಂಸೆಯನ್ನು ಸೃಷ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ವಾರಣಾಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವೂ ಆಗಿರುವುದರಿಂದ ಪೊಲೀಸರು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಈ ಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಶಂಖಿತರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಗೋವಧೆಯನ್ನು ನಿಷೇಧ ವಿಧಿಸುತ್ತಿರುವುದಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಈ ಪತ್ರ ಬಂದಿರಬಹುದು ಎನ್ನಲಾಗುತ್ತಿದೆ.

Loading...

Leave a Reply

Your email address will not be published.

error: Content is protected !!