ಬಿಹಾರದಲ್ಲಿ ಐಸಿಸ್ ಪೋಸ್ಟರ್‌ಗಳು

***

ಬಿಹಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಪೋಸ್ಟರ್ ಗಳು ಕಾಣಿಸಿಕೊಂಡಿವೆ. ರೋಹಟಸ್ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಪೋಸ್ಟರ್ ಗಳು ಕಾಣಿಸಿವೆ. ಪೊಲೀಸರ ಪ್ರಕಾರ ಬಿಹಾರ ಮಾತ್ರವಲ್ಲದೆ ದೇಶದ ಇತರೆ ಪ್ರದೇಶಗಳಲ್ಲಿ ಕೂಡಾ ಉಗ್ರರಿದ್ದಾರೆ ಎಂದು ಆ ಪೋಸ್ಟರ್ ಗಳಲ್ಲಿ ಬರೆಯಲಾಗಿದೆ. ಪೋಸ್ಟರ್ ಗಳಲ್ಲಿ ಐಸಿಸ್ ಸಂಘಟನೆಯ ಲೋಗೋ, ಉಗ್ರರ ಚಿತ್ರಗಳೂ ಇವೆ. ಗ್ರಾಮದ ವಿದ್ಯುತ್ ಕಂಬಗಳಿಗೆ ಈ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ವಿಷಯ ತಿಳಿದು ಅಲ್ಲಿಗೆ ಬಂದ ಪೊಲೀಸರು ಐಸಿಸ್ ಪೋಸ್ಟರ್ ಗಳ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.