ಏನೂ ಅರಿಯದ ಮಕ್ಕಳು ಆಗುತ್ತಿದ್ದಾರೆ ಮಾನವ ಬಾಂಬರ್ ಗಳು |News Mirchi

ಏನೂ ಅರಿಯದ ಮಕ್ಕಳು ಆಗುತ್ತಿದ್ದಾರೆ ಮಾನವ ಬಾಂಬರ್ ಗಳು

ಭಯೋತ್ಪಾದಕ ಸಂಘಟನೆಗಳು ಮಕ್ಕಳನ್ನು ತಮ್ಮ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದು, ವಿಶ್ವಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಹೀಗೆ ಉಗ್ರ ಕೃತ್ಯಗಳನ್ನೆಸಗಲು ಉಪಯೋಗಿಸಿಕೊಳ್ಳುತ್ತಿವೆ ಎಂದು ಯುನಿಸೆಫ್ ವರದಿ ಹೇಳುತ್ತಿದೆ. ಸಣ್ಣ ಮಕ್ಕಳನ್ನು ಮಾನವ ಬಾಂಬರ್ ಗಳನ್ನಾಗಿ ತಯಾರು ಮಾಡುತ್ತಿರುವುದು ಆತಂಕದ ವಿಷಯ.

ಟರ್ಕಿಯ ಗಜಿಯಾಂಟೆಫ್ ನಗರದಲ್ಲಿ ಮದುವೆಯೊಂದು ನಡೆಯುತ್ತಿತ್ತು.. ಆ ವೇಳೆ ಅಲ್ಲಿಗೆ ಬಂದ 12 ರಿಂದ 14 ವರ್ಷ ದ ವಯಸ್ಸಿನ ಬಾಲಕನೊಬ್ಬ ಅಲ್ಲಿಗೆ ಬಂದು ಸಂಭ್ರಮದಲ್ಲಿ ಮುಳುಗಿದ್ದ ಆ ಪ್ರದೇಶದಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಾಂಬು ಸ್ಪೋಟಿಸಿಕೊಂಡ. ನೋಡನೋಡುತ್ತಿದ್ದಂತೆ ಆ ಪ್ರದೇಶವೆಲ್ಲಾ ಮೃತದೇಹಗಳು, ಮಾಂಸದ ಮುದ್ದೆಗಳಿಂದ, ರಕ್ತದ ಹೊಳೆಯಿಂದ ತುಂಬಿ ಹೋಯಿತು. ಈ ಘಟನೆಯಲ್ಲಿ 51 ಜನರು ಸಾವನ್ನಪ್ಪಿದರು.

  • No items.

ಐಎಸ್ಐಎಸ್ ಇವರನ್ನು ಹೋರಾಟಕ್ಕೆ ಧುಮುಕಿದ ಚಿರತೆಗಳೆಂದು ಬಣ್ಣಿಸುತ್ತದೆ. ಆತ್ಮಹತ್ಯಾ ಬಾಂಬರ್ ಗಳನ್ನಾಗಿ ತಯಾರು ಮಾಡುತ್ತಿರುವ ರೀತಿಯನ್ನು ಸಾಮಾಜಿಕ ತಾಣಗಳ ಮೂಲಕ ಜಗತ್ತಿಗೆ ಹೇಳುತ್ತಿದೆ. ಬಾಂಬುಗಳನ್ನು ತಯಾರಿಸುವುದು, ಆತ್ಮಾಹುತಿ ದಾಳಿಗಳು, ತಲೆ ಕಡಿದು ಕೊಲ್ಲುವುದು ಮುಂತಾದ ವಿಷಯಗಳ ಕುರಿತು ಅವರಿಗೆ ತರಬೇತಿ ನೀಡುತ್ತಿದೆ. ಅವರ ಕೈಗೆ ಬೊಂಬೆಗಳನ್ನು ನೀಡಿ ಅವುಗಳ ತಲೆ ಕಡಿಯುವುದು, ಸಣ್ಣ ಬಾಂಬುಗಳಿಂದ ಅವುಗಳನ್ನು ನಾಶ ಮಾಡುವುದು ಮುಂತಾದವುಗಳನ್ನು ಕ್ರಮವಾಗಿ ಕಲಿಸುತ್ತಾ ಮಾನವ ನಾಶಕ್ಕೆ ಪ್ರಚೋದಿಸುತ್ತಿದೆ.

ಉಗ್ರರು ಕಟ್ಟಿದ್ದ ಬಾಂಬ್ ತೆಗೆಯುತ್ತಿರುವ ಇರಾಕ್ ಸೈನಿಕ

ಐಸಿಸ್ ಸೈನಿಕರ ಮೇಲೆ ಈಗಾಗಲೇ ಹಲವು ದೇಶಗಳು ವೈಮಾನಿಕ ದಾಳಿ ನಡೆಸಿ ಭಯೋತ್ಪಾದಕರಿಗೆ ತೀವ್ರ ನಷ್ಟ ಉಂಟು ಮಾಡುತ್ತಿವೆ. ಹೀಗಾಗಿ ಭಯೋತ್ಪಾದಕರು ಸಣ್ಣ ಮಕ್ಕಳ ಸೊಂಟಕ್ಕೆ ಬಾಂಬ್ ಕಟ್ಟಿ ಮಾನವ ಬಾಂಬರ್ ಗಳನ್ನಾಗಿ ತಯಾರು ಮಾಡುತ್ತಿದೆ. ಟರ್ಕಿಯಲ್ಲಿ ಬಾಲಕನೊಬ್ಬ ಆತ್ಮಾಹುತಿ ದಾಳಿ ನಡೆಸುವ ಮುನ್ನಾ ದಿನ, ಇರಾಕ್ ನಲ್ಲಿನ ಕಿರ್ಕಕ್ ನಗರದಲ್ಲಿ ಹನ್ನೆರಡು ವರ್ಷದ ಬಾಲಕ ಭಯದಿಂದ ನಡುಗುತ್ತಾ ತಿರುಗಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆ ಹನ್ನೆರಡು ವರ್ಷದ ಬಾಲಕನನ್ನು ವಿಚಾರಿಸಿದಾಗ ಆ ಬಾಲಕನ ಕಣ್ಣಿಂದ ಧಾರಾಕಾರವಾಗಿ ಸುರಿಯಿತು ಕಣ್ಣೀರು. ಪರಿಶೀಲಿಸಿದರೆ ಅವನ ಸೊಂಟದ ಸುತ್ತಾ ಕಟ್ಟಿದ ಎರಡು ಕೆಜಿ ತೂಕದ ಬಾಂಬುಗಳು ದೊರೆತವು.

ಈ ಹಿಂದೆ ಅಫ್ಘನಿಸ್ತಾನದಲ್ಲಿನ ತಾಲಿಬಾನ್ ಉಗ್ರರು ಮಕ್ಕಳನ್ನು ಮಾನವ ಬಾಂಬರ್ ಗಳನ್ನಾಗಿ ಬಳಸಿಕೊಳ್ಳುತ್ತಿದ್ದರು. ನೈಜೀರಿಯಾದ ಬೋಕೋಹಮ್ ಉಗ್ರರು ಸಹಾ ತಮ್ಮ ಗುರಿ ಮುಟ್ಟಲು ಮಕ್ಕಳನ್ನು ಉಪಯೋಗಿಸಿಕೊಳ್ಳುವುದು ಆರಂಭಿಸಿದರು. ಹಳ್ಳಿ, ಶಾಲೆಗಳ ಮೇಲೆ ದಾಳಿ ಮಾಡಿ ಮಕ್ಕಳನ್ನು ಅಪಹರಣ ಮಾಡಿ ಮಾನವ ಬಾಂಬರ್ ಗಳನ್ನಾಗಿ ತಯಾರಿಸುತ್ತಿರುತ್ತಾರೆ. ಎರಡು ವರ್ಗಳ ಹಿಂದೆ ಶಾಲೆಯೊಂದರ ಮೇಲೆ ದಾಳಿ ನಡೆಸಿದ ಬೊಕೋಹರಮ್ ಉಗ್ರರು, 276 ಮಕ್ಕಳನ್ನು ಅಪಹರಿಸಿದ್ದು ಇಂದಿಗೂ ಅವರ ಸುಳಿವಿಲ್ಲ. ಅಫ್ಘನಿಸ್ತಾನ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚದ್, ಕೊಲಂಬಿಯಾ, ಸೋಮಾಲಿಯಾ, ದಕ್ಷಿಣ ಸೂಡಾನ್, ಸೂಡಾನ್, ಥಾಯ್ಲೆಂಡ್, ಉಗಾಂಡಾ, ಯೆಮೆನ್ ದೇಶಗಳಲ್ಲಿನ ಉಗ್ರರು ಮಕ್ಕಳನ್ನು ಮಾನವ ಬಾಂಬರ್ ಗಳಾಗಿ ಅಥವಾ ಬಾಂಬು ಮತ್ತು ಸ್ಪೋಟಕ ಪದಾರ್ಥಗಳನ್ನು ಸಾಗಿಸಲು ಬಳಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಅರ್ಧದಷ್ಟು ಜನ ಹೆಣ್ಣು ಮಕ್ಕಳು. ಸಣ್ಣ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳನ್ನು ಲೈಂಗಿಕ ಗುಲಾಮರನ್ನಾಗಿ ಮಾರಾಟಕ್ಕಿಡುತ್ತಿರುವುದು ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಪಾಪ ಕೃತ್ಯಗಳಲ್ಲಿ ಒಂದು.

Loading...
loading...
error: Content is protected !!