ಜಾಕಿರ್ ನಾಯಕ್ ಗೆ ಮಲೇಷ್ಯಾದಲ್ಲಿ ಆಶ್ರಯ – News Mirchi

ಜಾಕಿರ್ ನಾಯಕ್ ಗೆ ಮಲೇಷ್ಯಾದಲ್ಲಿ ಆಶ್ರಯ

ಕೌಲಾಲಂಪುರ: ವಿವಾದಿತ ಮತ ಪ್ರಚಾರಕ ಜಾಕಿರ್ ನಾಯಕ್(52) ಗೆ ಮಲೇಷಿಯಾ ಸರ್ಕಾರ ಆಶ್ರಯ ನೀಡಲು ಮುಂದಾಗಿದೆ. ತಮ್ಮ ದೇಶದಲ್ಲಿ ನಿರಾಶ್ರಿತನಾಗಿ ಆಶ್ರಯ ಪಡೆಯಲು ಆತನಿಗೆ ಮಲೇಷಿಯಾ ಸರ್ಕಾರ ಅನುಮತಿ ನೀಡಿದೆ. ಪುತ್ರ ಮಸೀದಿಯಿಂದ ಜಾಕೀರ್ ತನ್ನ ಅಂಗರಕ್ಷಕನೊಂದಿಗೆ ಹೊರಗೆ ಬರುತ್ತಿರುವ ದೃಶ್ಯ ಆನ್ಲೈನ್ ನಲ್ಲಿ ಹರಿದಾಡುತ್ತಿದೆ. ಈ ಮಸೀದಿಯಲ್ಲಿಯೇ ಆ ದೇಶದ ಪ್ರಧಾನಿ ನಜೀಬ್ ರಜಾಕ್ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳುತ್ತಾರೆ.

2018 ಜೂನ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಬಹುಸಂಖ್ಯಾತ ಮಲಯಾ ಮುಸ್ಲಿಮರ ಮತಗಳನ್ನು ಸೆಳೆಯಲು ರಜಾಕ್ ಈ ಕ್ರಮ ಕೈಗೊಂಡಿರುವುದಾಗಿ ಭಾವಿಸಲಾಗಿದೆ. ಈ ಕುರಿತು ಆ ದೇಶದ ಉಪ ಪ್ರಧಾನಿ ಅಹ್ಮದ್ ಜಹೀದ್ ಸಂಸತ್ತಿನಲ್ಲಿ ಮಾತನಾಡುತ್ತಾ, ಜಾಕಿರ್ ಐದು ವರ್ಷಗಳ ಹಿಂದೆಯೇ ಮಲೇಷಿಯಾದಲ್ಲಿ ಖಾಯಂ ನಿವಾಸಕ್ಕೆ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು. ಜಾಕಿರ್ ನನ್ನು ವಶಕ್ಕೆ ನೀಡುವಂತೆ ಭಾರತದಿಂದ ಯಾವುದೇ ಮನವಿಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...