ಐತಿಹಾಸಿಕ ಮಸೀದಿಯನ್ನು ಸ್ಪೋಟಿಸಿದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು – News Mirchi

ಐತಿಹಾಸಿಕ ಮಸೀದಿಯನ್ನು ಸ್ಪೋಟಿಸಿದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು

 ಮೊಸೂಲ್ (ಇರಾಕ್): ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆಯು ಬುಧವಾರ ಮೊಸೂಲ್ ನಲ್ಲಿನ ಪ್ರಸಿದ್ದ ಅಲ್ ನೂರಿ ಮಸೀದಿ ಮತ್ತು ಅದರ ಪ್ರಸಿದ್ಧ ಮಿನಾರ್ ಅನ್ನು ಸ್ಪೋಟಗೊಳಿಸಿದೆ. ಉಗ್ರ ಸಂಘಟನೆಯ ನಾಯಕ ಅಬು ಬಕರ್ ಅಲ್ ಬಾಗ್ದಾದಿ 2014 ರಲ್ಲಿ ಇದೇ ಮಸೀದಿ ಬಳಿಯೇ ತನ್ನನ್ನು ತಾನು “ಕಲೀಫ” ಎಂದು ಘೋಷಿಸಿಕೊಂಡಿದ್ದು ಗಮನಾರ್ಹ. ಅದೇ ಆತ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು.

ಇರಾಕಿನ ಭಯೋತ್ಪಾದನೆ ವಿರೋಧಿ ಪಡೆಗಳು ಹಳೇ ಮೊಸೂಲ್ ನಗರವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ಮಸೀದಿಯಿಂದ ಕೇವಲ 50 ಮೀಟರ್ ದೂರದಲ್ಲಿದ್ದಾಗ ಈ ಮಸೀದಿ ಸ್ಪೋಟಗೊಂಡಿದೆ. ಎಂದು ಸೇನಾ ಮೂಲಗಳು ಹೇಳಿವೆ. ಬುಧವಾರವಷ್ಟೇ ಅಮೆರಿಕಾ ಮೈತ್ರಿಪಡೆಯೊಂದಿಗೆ ಸೇರಿ ಮೊಸೂಲ್ ವಶಪಡಿಸಿಕೊಳ್ಳಲು ಹೋಗುತ್ತಿರುವುದಾಗಿ ಇರಾಕ್ ಪಡೆಗಳು ಹೇಳಿದ್ದವು.

ಮಸೀದಿ ಸ್ಪೋಟಕ್ಕೆ ಇಸ್ಲಾಮಿಕ್ ಸ್ಟೇಟ್ಸ್ ಕಾರಣ ಎಂದು ಅಮೆರಿಕಾ ಸೇನೆ ಹೇಳುತ್ತಿದ್ದರೆ, ಉಗ್ರ ಸಂಘಟನೆ ಮಾತ್ರ ಇದು ಅಮೆರಿಕಾ ದಾಳಿಯಿಂದಾದ ಘಟನೆ ಎಂದು ಆರೋಪಿಸಿದೆ. ಆದರೆ ಅಮೆರಿಕಾ ಸೇನೆ ಇದನ್ನು ಅಲ್ಲಗೆಳೆದಿದ್ದು, ಈ ಪ್ರದೇಶದಲ್ಲಿ ಯಾವುದೇ ದಾಳಿಯನ್ನು ಮಾಡಿಲ್ಲ ಎಂದು ಅಮೆರಿಕಾ ಸೇನೆ ಸ್ಪಷ್ಟಪಡಿಸಿದೆ.

Loading...