ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಇಸ್ರೇಲ್ ಬೆಂಬಲ

ಎಂಟು ದಿನಗಳ ಪ್ರವಾಸದ ಭಾಗವಾಗಿ ಇಸ್ರೇಲ್ ಅಧ್ಯಕ್ ರುಯ್‌ವೆನ್ ರಿವ್ಲಿನ್ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳು, ಇತರ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಂಗಳವಾರ ಚರ್ಚಿಸಲಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಇಂಡೀ-ಇಸ್ರೇಲ್ ಸಂಬಂಧಗಳು ದಿನೇ ದಿನೇ ಬಲಗೊಳ್ಳುತ್ತಿದ್ದು, ದ್ವಿಪಕ್ಷೀಯ ಸಂಬಂಧ ಆರಂಭವಾಗಿ 25 ವರ್ಷಗಳ ಆಚರಣೆಯನ್ನು ಮುಂದಿನ ವರ್ಷ ನಡೆಸಬೇಕೆಂದು ಉಭಯ ದೇಶಗಳು ತೀರ್ಮಾನಿಸಿವೆ.