ಒಂದೇ ಬಾರಿಗೆ 103 ಉಪಗ್ರಹ ಕಳುಹಿಸಿ ದಾಖಲೆ ಬರೆಯಲಿರುವ ಇಸ್ರೋ |News Mirchi

ಒಂದೇ ಬಾರಿಗೆ 103 ಉಪಗ್ರಹ ಕಳುಹಿಸಿ ದಾಖಲೆ ಬರೆಯಲಿರುವ ಇಸ್ರೋ

ಬಾಹ್ಯಾಕಾಶ ಪರೀಕ್ಷೆ ಇತಿಹಾಸದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ದಾಖಲೆಯನ್ನು ಬರೆಯಲು ಸಿದ್ಧವಾಗುತ್ತಿದೆ. ಇಲ್ಲಿಯವರೆಗೂ ಯಾವ ದೇಶವೂ ಮಾಡದಂತ ಪರೀಕ್ಷೆ ಮಾಡಲು ತಯಾರಾಗಿ ನಿಂತಿದೆ. ಒಂದೇ ಬಾರಿಗೆ 103 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಹಸಕ್ಕೆ ಇಸ್ರೋ ಕೈಹಾಕುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಈ ಅಪರೂಪದ ಪರೀಕ್ಷೆ ನಡೆಸುವ ಮೂಲಕ‌ ಹೊಸ ದಾಖಲೆ ಬರೆಯಲಿದೆ.

ಇಸ್ರೋಗೆ ಅತ್ಯಂತ ನಂಬುಗೆಯ ರಾಕೆಟ್ ಪಿಎಸ್ಎಲ್‌ವಿ ಸಿ-37 ರಾಕೆಟ್ ಮೂಲಕ ಇವುಗಳನ್ನು ಶ್ರೀಹರಿಕೊಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪರೀಕ್ಷಿಸಲಾಗುತ್ತದೆ. ಈ 103 ಉಪಗ್ರಹಗಳಲ್ಲಿ 100 ಉಪಗ್ರಹಗಳು ವಿದೇಶಗಳಿಗೆ ಸೇರಿರುವುದು ವಿಶೇಷ.

ಯಾವ ದೇಶದ ಎಷ್ಟು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂಬುದು ತಿಳಿದುಬಂದಿಲ್ಲವಾದರೂ, ಅಮೆರಿಕಾ, ಜರ್ಮನಿ ದೇಶಗಳ ಉಪಗ್ರಹಗಳೂ ಇವೆ ಎನ್ನಲಾಗಿದೆ.

ಮೊದಲು ಜನವರಿಯಲ್ಲಿ 83 ಉಪಗ್ರಹಗಳನ್ನು ಪರೀಕ್ಷಿಸಲು ನಿರ್ಧರಿಸಲಾಗಿತ್ತು. ಆದರೆ ಮತ್ತೆ 20 ಉಪಗ್ರಹಗಳ ಆರ್ಡರ್ ಬಂದ ಕಾರಣ ಪ್ರಯೋಗವನ್ನು ಫೆಬ್ರವರಿ ಮೊದಲವಾರಕ್ಕೆ ಮುಂದೂಡಲಾಯಿತು.

ಇದುವರೆಗೂ ರಷ್ಯಾ ಒಂದೇ ರಾಕೆಟ್ ಮೂಲಕ ಒಮ್ಮೆಲೇ 37 ಉಪಗ್ರಹ ಉಡಾವಣೆ ಮಾಡಿದ್ದರೆ, ಅಮೆರಿಕಾ 29 ಉಪಗ್ರಹಗಳನ್ನು ಕಳುಹಿಸಿತ್ತು. ಕಳೆದ ವರ್ಷ ಇಸ್ರೋ 20 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

Loading...
loading...
error: Content is protected !!