ಪಿಎಸ್ಎಲ್ವಿ ಸಿ-39 ಪ್ರಯೋಗ ವಿಫಲ – News Mirchi

ಪಿಎಸ್ಎಲ್ವಿ ಸಿ-39 ಪ್ರಯೋಗ ವಿಫಲ

ಸಂಪೂರ್ಣ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯ ಉದ್ದೇಶದಿಂದ ಪ್ರಯೋಗಿಸಿದ ಸರಣಿಯ 8ನೇ ಉಪಗ್ರಹ “ಐ.ಆರ್.ಎನ್.ಎಸ್.ಎಸ್-1 ಹೆಚ್”(IRNSS-1H) ಪರೀಕ್ಷೆ ವಿಫಲವಾಗಿದೆ. ಆಗಸಕ್ಕೆ ಚಿಮ್ಮಿ ಮೂರು ಹಂತಗಳಲ್ಲಿ ಯಶಸ್ವಿಯಾದ ಪಿಎಸ್ಎಲ್ವಿ ಸಿ-39 ರಾಕೆಟ್, ತಾಂತ್ರಿಕ ಕಾರಣಗಳಿಂದಾಗಿ ನಾಲ್ಕನೇ ಹಂತದಲ್ಲಿ ವಿಫಲವಾಯಿತು. ಹೀಟ್ ಶೀಲ್ಡ್ ನಿಂದ ಉಪಗ್ರಹ ಹೊರಗೆ ಬಾರದಿದ್ದುದೇ ಪ್ರಯೋಗ ವಿಫಲವಾಗಲು ಕಾರಣ ಎನ್ನಲಾಗುತ್ತಿದೆ.

ಉಪಗ್ರಹ ಪ್ರಯೋಗದ ಯಾವುದೇ ಹಂತದಲ್ಲಿಯೂ ಯಾವ ಸಮಸ್ಯೆ ಎದುರಾಗಲಿಲ್ಲ. ಹೀಟ್ ಶೀಲ್ಡ್ ನಿಂದ ಉಪಗ್ರಹ ಬೇರ್ಪಟ್ಟಿದ್ದರೆ ಅದು ನಿಗದಿತ ಕಕ್ಷೆ ಸೇರುತ್ತಿತ್ತು ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ಅವರು ಹೇಳಿದ್ದಾರೆ.

ಭಾರತದ ನ್ಯಾವಿಗೇಷನ್ ವ್ಯವಸ್ಥೆ(ನಾವಿಕ್) ಉದ್ದೇಶದಿಂದ 2013 ರಿಂದ 2016 ರ ನಡುವೆ 7 ಐ.ಆರ್.ಎನ್.ಎಸ್.ಎಸ್(IRNSS) ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿತ್ತು.

Contact for any Electrical Works across Bengaluru

Loading...
error: Content is protected !!