ಇಸ್ರೋದಿಂದ ಕಾರ್ಟೋಸ್ಯಾಟ್-2 ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋದಿಂದ ಕಾರ್ಟೋಸ್ಯಾಟ್-2 ಉಪಗ್ರಹ ಯಶಸ್ವಿ ಉಡಾವಣೆ

ಕಾರ್ಟೋಸ್ಯಾಟ್-2 ಮತ್ತು ಇತರೆ 30 ಉಪಗ್ರಹಗಳನ್ನು ಪೋಲಾರ್ ಸ್ಯಾಟಲೈಟ್ ವೆಹಿಕಲ್(ಪಿಎಸ್ಎಲ್ವಿ-ಸಿ40) ರಾಕೆಟ್ ಮೂಲಕ ಇಂದು ಬೆಳಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿತು.

28 ಗ್ರಾಹಕರ ಉಪಗ್ರಹಗಳು

ಕಾರ್ಟೋಸ್ಯಾಟ್, ನ್ಯಾನೋಸ್ಯಾಟ್, ಒಂದು ಮೈಕ್ರೋಸ್ಯಾಟ್ ಮತ್ತು 28 ಗ್ರಾಹಕರ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ 2018ರಲ್ಲಿ ಶುಭಾರಂಭ ಮಾಡಿದೆ. ನಾವು ದೇಶಕ್ಕೆ ಹೊಸ ವರ್ಷದ ಕೊಡುಗೆ ನೀಡಲು ಸಂತಸಪಡುತ್ತೇವೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.

ಇದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಕೈಗೊಂಡ 100 ನೇ ಉಡಾವಣೆಯಾಗಿರುವುದು ಮತ್ತೊಂದು ವಿಶೇಷ. ಕಳೆದ ಆಗಸ್ಟ್ 31 ರಂದು ನಡೆಸಿದ್ದ ಪರೀಕ್ಷೆ ವಿಫಲವಾದ ನಂತರ ಈ ಉಡಾವಣೆಯನ್ನು ಭಾರತವೂ ಸೇರಿದಂತೆ ವಿಶ್ವವೇ ಹತ್ತಿರದಿಂದ ಗಮನಿಸುತ್ತಿತ್ತು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!