ಲಾಲೂ ಕುಟುಂಬದ ಬೇನಾಮಿ ಆಸ್ತಿ ವಶಪಡಿಸಿಕೊಂಡ ತೆರಿಗೆ ಇಲಾಖೆ |News Mirchi

ಲಾಲೂ ಕುಟುಂಬದ ಬೇನಾಮಿ ಆಸ್ತಿ ವಶಪಡಿಸಿಕೊಂಡ ತೆರಿಗೆ ಇಲಾಖೆ

ಬೇನಾಮಿ ಆಸ್ತಿ ಹೊಂದಿರುವ ಮತ್ತು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ, ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ಮಗಳು ಮೀಸಾ ಭಾರ್ತಿ ಮತ್ತು ಆಕೆಯ ಪತಿ ಶೈಲೇಶ್ ಕುಮಾರ್ ಅವರಿಗೆ ಸಂಬಂಧಿಸಿದ ಕೆಲವು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ಆಸ್ತಿ ಹೊಂದಿರುವ ಆರೋಪ ಇವರ ಮೇಲಿದೆ.

ಈ ಹಿಂದೆ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಮೀಸಾ ಭಾರ್ತಿ ಮತ್ತು ಆಕೆಯ ಪತಿ ಹಾಜರಾಗಲು ವಿಫಲವಾದ ನಂತರ ಐಟಿ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಸಮನ್ಸ್ ಜಾರಿ ಮಾಡುವುದಕ್ಕೂ ಮುನ್ನ ರೂ.8,000 ಕೋಟಿ ಮೌಲ್ಯದ ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರ್ತಿಯವರ ಚಾರ್ಟರ್ಡ್ ಅಕೌಂಟೆಂಟ್ ರಾಕೇಶ್ ಅಗರ್ವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆತ ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಲಾಲೂ ಕುಟುಂಬಕ್ಕೆ ನೆರವಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಶಂಕೆ.

Loading...
loading...
error: Content is protected !!