ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೇಲೆ ಐಟಿ ದಾಳಿ

ಚೆನ್ನೈ: ತಮಿಳುನಾಡು ಸರ್ಕಾರದ ರಾಮಮೋಹನರಾವ್ ಆಸ್ತಿಗಳಿಗೆ ಸಂಬಂಧಿಸಿದಂತೆ ಐಟಿ ದಾಳಿಗಳು ಮುಂದುವರೆದಿವೆ. ಬೆಳಗ್ಗೆಯಿಂದ ಅವರ, ಅವರ ಸಂಬಂಧಿಕರ ಮನೆಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸಿಎಸ್ ರಾಮಮೋಹನರಾವ್ ಕಛೇರಿಯಲ್ಲಿಯೂ ಶೋಧ ಕಾರ್ಯ ನಡೆದಿದೆ.

ಇನ್ನು ರಾಮಮೋಹನರಾವ್ ಪುತ್ರನ ಮನೆಯಿಂದ ರೂ. 18 ಲಕ್ಷ ಕರೆನ್ಸಿಯೊಂದಿಗೆ 2 ಕೆಜಿ ಚಿನ್ನವನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಟಿಟಿಡಿ ಬೋರ್ಡ್ ಮಾಜಿ ಸದಸ್ಯ ಶೇಖರ್ ರೆಡ್ಡಿಯೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಶೇಖರ್ ರೆಡ್ಡಿ ಮನೆಯಲ್ಲಿ ರೂ.100 ಕೋಟಿಗೂ ಅಧಿಕ ಕರೆನ್ಸಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮಮೋಹನರಾವ್ ನಿವಾಸದ ಮೇಲೆ ತೆರಿಗೆ ಅಧಿಕಾರಿಗಳು ಸೋಮವಾರ ಮುಂಜಾನೆ 5:30 ಗಂಟೆಗೆ ದಾಳಿ ಆರಂಭಿಸಿದ್ದರು.

ಕಳೆದ ಚುನಾವಣೆ ಸಮಯದಲ್ಲಿ ಹಾಗೂ ಇತ್ತೀಚೆಗೆ ನಗದು ಪರಿವರ್ತನೆ ವಿಷಯಗಳಿಗೆ ಸಂಬಂಧಿಸಿದಂತೆ ಅವರ ಮೇಲೆ ಹಲವು ಬಾರಿ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು. ದಿವಂಗತ ಮುಖ್ಯಮಂತ್ರಿ ಜಯಲಲಿತಾ, ಶಶಿಕಲಾ, ಈಗಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರವರಿ‌ಗೂ ಕೂಡಾ ರಾವ್ ಆಪ್ತನೆಂದು, ಅವರೆಲ್ಲರ ಆರ್ಥಿಕ ವ್ಯವಹಾರಗಳಲ್ಲಿ ರಾಮಮೋಹನ ರಾವ್ ಸಲಹೆ ನೀಡುತ್ತಿರುತ್ತಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಶೇಖರ್ ರೆಡ್ಡಿ ಮೇಲೆ ನಡೆದ ದಾಳಿಯ ನಂತರ ಇತರರ ಮೇಲೆಯೂ ನಡೆಯಬಹುದು ಎಂಬ ಅನುಮಾನಗಳಿದ್ದವಾದರೂ, ಮನೆಯ ಮೇಲೆಯೇ ದಾಳಿ ನಡೆಯಬಹುದು ಎಂದು ಯಾರೂ ಊಹಿಸಿರಲಿಲ್ಲ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache