ಮುಂದುವರೆದ ಐಟಿ ದಾಳಿ, 70 ಕೋಟಿ ಮೌಲ್ಯದ ಹೊಸ ನೋಟು ಪತ್ತೆ – News Mirchi

ಮುಂದುವರೆದ ಐಟಿ ದಾಳಿ, 70 ಕೋಟಿ ಮೌಲ್ಯದ ಹೊಸ ನೋಟು ಪತ್ತೆ

ಚೆನ್ನೈ: ಹಳೆಯ ನೋಟು ರದ್ದಾದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿಗಳನ್ನು ಮುಂದುವರೆಸಿದ್ದಾರೆ. ಚೆನ್ನೈನಲ್ಲಿ ನಾಲ್ವರು ದೊಡ್ಡ ಉದ್ಯಮಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಶೇಖರ್ ರೆಡ್ಡಿ, ಶ್ರೀನಿವಾಸರೆಡ್ಡಿ, ಪ್ರೇಮ್ ರೆಡ್ಡಿ, ಕಿರಣ್ ರೆಡ್ಡಿ ಎಂಬುವವರ ನಿವಾಸಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 400 ಕೋಟಿ ಮೌಲ್ಯದ ದಾಖಲೆ ಪತ್ರಗಳ ಜೊತೆ 90 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಹಣದಲ್ಲಿ 70 ಕೋಟಿ ಮೌಲ್ಯದ ಹಣ ಹೊಸ ನೋಟುಗಳಲ್ಲಿದೆ. ಇನ್ನುಳಿದ 20 ಕೋಟಿ ಹಳೆಯ ನೋಟಿನಲ್ಲಿದೆ. ಇದರ ಜೊತೆಗೆ 100 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಇಷ್ಟು ಮೊತ್ತದ ಹೊಸ ನೋಟುಗಳು ಎಲ್ಲಿಂದ ಬಂತು ಎಂಬ ವಿಷಯದ ಕುರಿತು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹೊಸ ನೋಟು ಸಿಗದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರೆ, ಇವರಿಗೆ 70 ಕೋಟಿ ಮೌಲ್ಯದ ಹೊಸ ನೋಟು ಸಿಗಲು ಬ್ಯಾಂಕು ಅಧಿಕಾರಿಗಳು ಸಹಕರಿಸಿದರೇ ಎಂಬ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.

Loading...

Leave a Reply

Your email address will not be published.