ಡಿ.ಕೆ. ಸಹೋದರರು ಮತ್ತು ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ದಾಳಿ – News Mirchi

ಡಿ.ಕೆ. ಸಹೋದರರು ಮತ್ತು ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ದಾಳಿ

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಅವರ ನಿವಾಸಗಳ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ಸದಾಶಿವನಗರದ ನಿವಾಸ ಮತ್ತು ರಾಮನಗರದ ಕನಕಪುರದ ನಿವಾಸಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಆಪ್ತ ಎಸ್.ರವಿ ಅವರ ಮನೆ ಮೇಲೂ ದಾಳಿ ನಡೆದಿದೆ. ಒಟ್ಟು ನಾಲ್ಕು ತಂಡಗಳಲ್ಲಿ ನಾಲ್ಕು ಕಡೆ ಸುಮಾರು 80 ಜನ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸೇನೆಯ ಗುರಿ ಉಗ್ರರ ನಾಯಕರು, ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿರುವ ಯೋಧರು

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುಜರಾತ್ ಶಾಸಕರು ಉಳಿದುಕೊಂಡಿರುವ ಈಗಲ್ ಟನ್ ರೆಸಾರ್ಟ್ ಮೇಲೂ ಕೂಡಾ ದಾಳಿ ನಡೆದಿದೆ ಎನ್ನಲಾಗುತ್ತಿದೆ. 20 ಜನರ ಅಧಿಕಾರಿಗಳ ತಂಡ ಈಗಲ್ ಟನ್ ರೆಸಾರ್ಟ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೊರಗಿನಿಂದ ರೆಸಾರ್ಟ್ ಒಳಗೆ ತಪಾಸಣೆಯಿಲ್ಲದೆ ಯಾವುದೇ ವಾಹನಗಳನ್ನು ಬಿಡುತ್ತಿಲ್ಲ. ರೆಸಾರ್ಟ್ ನಲ್ಲಿನ ತಂಗಿರುವ ಗುಜರಾತ್ ಶಾಸಕರ ಕೊಠಡಿಗಳಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರು ಬಿಜೆಪಿ ಸೇರುವುದನ್ನು ತಪ್ಪಿಸಲು 44 ಗುಜರಾತ್ ಶಾಸಕರನ್ನು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಲಾಗಿದೆ.

ಜಿಡ್ಡು ಚರ್ಮಕ್ಕೆ 5 ಸಿಂಪಲ್ ಮನೆ ಮದ್ದು, ಪ್ರಯತ್ನಿಸಿ ನೋಡಿ

Contact for any Electrical Works across Bengaluru

Loading...
error: Content is protected !!