ಜನಾರ್ಧನ ರೆಡ್ಡಿಗೆ ಆದಾಯ ತೆರಿಗೆ ಅಧಿಕಾರಿಗಳ ಶಾಕ್

: ಇತ್ತೀಚೆಗಷ್ಟೇ ಅರಮನೆ ಮೈದಾನದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ ಅವರಿಗೆ ಈಗ ಐಟಿ ಇಲಾಖೆ ಶಾಕ್ ನೀಡಿದೆ. ಬಳ್ಳಾರಿಯಲ್ಲಿನ ಜನಾರ್ಧನ ರೆಡ್ಡಿಗೆ ಸೇರಿದ ಒಎಂಸಿ ಕಛೇರಿ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಏಳು ಜನರ ಐಟಿ ಅಧಿಕಾರಿಗಳ ತಂಡ ಒಂಎಂಸಿ ಕಛೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಬಳ್ಳಾರಿಯಲ್ಲಿನ ಜನಾರ್ಧನ ರೆಡ್ಡಿಯವರ ನಿವಾಸದ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಅರಮನೆ ಮೈದಾನದಲ್ಲಿ ಇದುವರೆಗೂ ಯಾರೂ ಕಂಡರಿಯದ ರೀತಿ ನೂರಾರು ಕೋಟಿ ವೆಚ್ಚದಲ್ಲಿ ಪುತ್ರಿ ಬ್ರಹ್ಮಿಣಿ ವಿವಾಹ ನೆರವೇರಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೆ ಮಾಡಿದ್ದ ವೆಚ್ಚದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache