ಬೆಂಗಳೂರಿನಲ್ಲಿ ಐಟಿ ದಾಳಿ, ಕೋಟ್ಯಂತರ ರೂ. ಹೊಸ ನೋಟು ಪತ್ತೆ! – News Mirchi

ಬೆಂಗಳೂರಿನಲ್ಲಿ ಐಟಿ ದಾಳಿ, ಕೋಟ್ಯಂತರ ರೂ. ಹೊಸ ನೋಟು ಪತ್ತೆ!

ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿದ ನಂತರ ಇದೇ ಮೊದಲಿಗೆ ಭಾರೀ ಪ್ರಮಾಣದ ಹೊಸ ನೋಟುಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು, ಸುಮಾರು 5 ಕೋಟಿ ಮೌಲ್ಯದ ರೂ.2 ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು ಪತ್ತೆ ಹಚ್ಚಿದ್ದಾರೆ.

ಜನ ಸಾಮಾನ್ಯರು ಈಗಲೂ 100 ರ ನೋಟು ಪಡೆಯಲು ಕ್ಯೂನಲ್ಲಿ ನಿಂತು ಒದ್ದಾಡುತ್ತಿದ್ದರೆ, ಕೋಟ್ಯಂತರ ರೂ. ಮೌಲ್ಯದ ಹೊಸ ನೋಟು ಅಧಿಕಾರಿಗಳ ಬಳಿ ಸೇರಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ.

ಕಾವೇರಿ ನಿಗಮದ ಎಂ.ಡಿ ಚಿಕ್ಕರಾಯಪ್ಪ ಮತ್ತು ರಾಜ್ಯದ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಎಂಬ ಹಿರಿಯ ಅಧಿಕಾರಿಗಳ ನಿವಾಸಗಳ ಮೇಲೆ ನಿನ್ನೆಯೇ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇಂದೂ(ಗುರುವಾರ) ಕೂಡಾ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ತೆಯಾದ ಹಣದಲ್ಲಿ 2 ಸಾವಿರದ ಮುಖಬೆಲೆಯ ನೋಟುಗಳ ಮೌಲ್ಯವೇ 5 ಕೋಟಿ ಎನ್ನಲಾಗಿದೆ.

ಅಷ್ಟೇ ಅಲ್ಲದೆ ದಾಳಿಯ ವೇಳೆ 5 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು 6 ಕೋಟಿ ಮೌಲ್ಯದ ಬೆಳ್ಳಿ ಪತ್ತೆಯಾಗಿದೆ. ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರುಗಳು ಪತ್ತೆಯಾಗಿವೆ.

Loading...

Leave a Reply

Your email address will not be published.