ಇತರೆ ದೇಶಗಳಂತೆ ಭಾರತದೊಂದಿಗೆ ವರ್ತಿಸಿದರೆ ನಮಗೇ ನಷ್ಟವೆಂದು ಎಚ್ಚರಿಸಿದ ಚೀನಾ ತಜ್ಞರು – News Mirchi

ಇತರೆ ದೇಶಗಳಂತೆ ಭಾರತದೊಂದಿಗೆ ವರ್ತಿಸಿದರೆ ನಮಗೇ ನಷ್ಟವೆಂದು ಎಚ್ಚರಿಸಿದ ಚೀನಾ ತಜ್ಞರು

ಭಾರತ ಮತ್ತು ಚೀನಾ ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಿದರೆ ಹೆಚ್ಚು ನಷ್ಟವಾಗುವುದು ಚೀನಾಗೇ ಎಂದು ಚೀನಾ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವದ ಜನಸಂಖ್ಯೆಯಲ್ಲಿ ಶೇ.35 ರಷ್ಟನ್ನು ಹೊಂದಿರುವ ಈ ಎರಡೂ ದೇಶಗಳು ಸಣ್ಣ ಗಡಿ ವಿವಾದದಿಂದ ಯುದ್ಧಕ್ಕೆ ಮುಂದಾಗುತ್ತವೆಯಾ ಎಂಬುದೇ ಈಗಿರುವ ಪ್ರಶ್ನೆ. ಈಶಾನ್ಯ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳು ಕೇವಲ 150 ಮೀಟರ್ ವ್ಯಾಪ್ತಿಯಲ್ಲಿ ನಿಂತಿವೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಹೋರಾಟ ಕೇವಲ ಸಿಕ್ಕಿಂ ವಲಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ಅರುಣಾಚಲ ಪ್ರದೇಶದಿಂದ ಹಿಡಿದು ಜಮ್ಮೂ ಕಾಶ್ಮೀರದವರೆಗೂ ವಿಸ್ತರಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. 1962 ರಂತೆ ಗಡಿಯುದ್ದಕ್ಕೂ ಯುದ್ಧ ವಾತಾವರಣ ನಿರ್ಮಾಣವಾದರೆ ಚೀನಾಗೆ ಹೆಚ್ಚು ಅನಾನುಕೂಲ ಹೆಚ್ಚು ಎನ್ನುತ್ತಿದ್ದಾರೆ.

ಚೀನಾಗೆ ಶೇ.80ಕ್ಕೂ ಹೆಚ್ಚು ಕಚ್ಚಾ ತೈಲ ಸರಬರಾಜಾಗುವ ಮಲಾಕಾ ಜಲಸಂಧಿ(ಮಲೇಷಿಯಾ ಇಂಡೋನೇಷಿಯಾ ನಡುವೆ) ಅಂಡಮಾನ್ ನಿಕೋಬಾರ್ ದ್ವೀಪಗಳ ಸಮೀಪವೇ ಇದೆ. ಆ ಪ್ರದೇಶದ ಮೂಲಕ ನಡೆಯುವ ಕಚ್ಚಾ ತೈಲ ಸರಬರಾಜಿನ ಮೇಲೆ ಯುದ್ಧ ಪ್ರಭಾವ ಬೀರುತ್ತದೆ. ದ್ವೀಪಗಳಲ್ಲಿ ಭಾರತಕ್ಕೆ ಭಾರೀ ನೌಕಾ ನೆಲೆಯಿದೆ. ನೌಕಾಪಡೆ ಕಣಕ್ಕಿಳಿದರೆ ಚೀನಾ ಹಡಗುಗಳು ಅಂಡಮಾನ್ ಮೂಲಕ ಹೋಗುವುದು ಕಷ್ಟ. 1999 ರಲ್ಲಿ ಕಾರ್ಗಿಲ್ ಯುದ್ಧ ಸಮಯದಲ್ಲಿಯೂ ಈ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಚೀನಾ ಸಹಕಾರ ನೀಡಲಿಲ್ಲ.

ಹತನಾದ ಉಗ್ರ ದುಜಾನಾ ಮತ್ತು ಸೇನಾಧಿಕಾರಿ ನಡುವಿನ ಸಂಭಾಷಣೆ

ಭಾರತ ಗುರಿಯಾಗಿಸಿಕೊಳ್ಳಬಲ್ಲ ಚೀನಾ ನೆಲೆಗಳು
ಚೀನಾ – ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ 4,500 ಕೋಟಿ ಡಾಲರ್ ಬಂಡವಾಳ ಹೂಡಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಉತ್ತರ ಭಾರತದ ಗಡಿ ರಣರಂಗವಾದರೆ ಭಾರತೀಯ ಸೇನೆ ಇವುಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಆಗ ಚೀನಾ ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತದೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಹಂಬಂತೋತಟ್ ತೀರ, ಪಾಕಿಸ್ತಾನದ ಗ್ವಾದರ್ ಪೋರ್ಟ್ ನ ಕೆಲ ಸೌಲಭ್ಯಗಳನ್ನು ಹೊಂದಲು ಚೀನಾ ಒಪ್ಪಂದ ಮಾಡಿಕೊಂಡಿದೆ. ಆಫ್ರಿಕಾ ದೇಶದ ಜಿಬೂಟಿಯಲ್ಲಿ ಚೀನಾ ಸೇನಾ ನೆಲೆ ವೇಗವಾಗಿ ಪೂರ್ಣಗೊಳ್ಳುತ್ತಿದೆ. ಯುದ್ಧ ಆರಂಭವಾದರೆ ಈ ಪ್ರದೇಶಗಳೆಲ್ಲಾ ಭಾರತೀಯ ನೌಕಾಪಡೆಯ ದಾಳಿಯ ವ್ಯಾಪ್ತಿಗೆ ಬರುತ್ತವೆ.

ಚೀನಾ ತಜ್ಞರು ಇದನ್ನೇ ಹೇಳುತ್ತಿದ್ದಾರೆ.
ಭಾರತದೊಂದಿಗೆ ತಗಾದೆ ಹೆಚ್ಚಾದರೆ ಚೀನಾ ಒನ್ ರೋಡ್ ಒನ್ ಬೆಲ್ಟ್ ಯೋಜನೆ, ಕಚ್ಚಾ ತೈಲ ಸರಬರಾಜು ಮಾರ್ಗಗಳಿಗೆ ಸಮಸ್ಯೆ ಎದುರಾಗುತ್ತದೆ ಎಂದು ಮಕಾವ್ ನ ಚೀನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡು ದೊಡ್ಡ ದೇಶಗಳ ನಡುವೆ ಯುದ್ಧ ನಡೆದರೆ ಒನ್ ರೋಡ್ ಒನ್ ಬೆಲ್ಟ್ ಯೋಜನೆಗೆ ತುಂಬಾ ಕಷ್ಟವಾಗುತ್ತದೆ ಎಂದು ಚೀನಾ ರಕ್ಷಣಾ ಕ್ಷೇತ್ರದ ತಜ್ಞರೊಬ್ಬರು ಎಚ್ಚರಿಸಿದ್ದಾರೆ. ಡೊಕ್ಲಾಂ ಹೆಸರಿನಲ್ಲಿ ಚೀನಾ ಯುದ್ಧ ವಾತಾವರಣ ಸೃಷ್ಟಿಸಿ ಭಾರತಕ್ಕೆ ತೊಂದರೆ ಕೊಟ್ಟರೆ, ಭಾರತವನ್ನು ಶತೃ ಶಿಬಿರದೊಳಕೆ ನಾವೇ ಕಳುಹಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಿಯಕರನೊಂದಿಗೆ ವಧು ಪರಾರಿ, ಸಂಭ್ರಮಾಚರಣೆ ನಡೆಸಿದ ವರ

ಏಕಕಾಲದಲ್ಲಿ ಮನವೊಲಿಸಿ, ಬೆದರಿಸುವ ತಂತ್ರಗಳಿಂದ ಚೀನಾ ಇತರೆ ಆಗ್ನೇಯ ಏಷ್ಯಾ ದೇಶಗಳನ್ನು ತನ್ನ ದಾರಿಗೆ ಎಳೆದುಕೊಂಡಂತೆ ಭಾರತವನ್ನು ಮಣಿಸುವುದು ಸಾಧ್ಯವಾಗುವ ಮಾತಲ್ಲ ಎಂದು ಅವರ ಸ್ಪಷ್ಟ ಅಭಿಪ್ರಾಯ. ಒನ್ ರೋಡ್ ಒನ್ ಬೆಲ್ಟ್ ಯೋಜನೆಯಲ್ಲಿ ಪಾಲುದಾರನಾಗಲು ಆರಂಭದಿಂದಲೂ ಹಿಂಜರಿಯುತ್ತಿರುವ ಭಾರತ, ಸದ್ಯ ನೆಲೆಸಿರುವ ಪರಿಸ್ಥಿತಿಗಳಿಂದಾಗಿ ಖಚಿತವಾಗಿ ಅದರ ಭಾಗವಾಗದೇ ಇರಬಹುದು ಎಂದು ಮತ್ತೊಬ್ಬ ತಜ್ಞರು ಚೀನಾ ಸರ್ಕಾರವನ್ನು ಎಚ್ಚರಿಸಿದ್ದಾರೆ.

Loading...