ಕಾರಿಗೆ ಕಲ್ಲು, ಇದು ಬಿಜೆಪಿ, ಆರ್.ಎಸ್.ಎಸ್ ರಾಜಕೀಯದ ಶೈಲಿ ಎಂದ ರಾಹುಲ್ – News Mirchi
We are updating the website...

ಕಾರಿಗೆ ಕಲ್ಲು, ಇದು ಬಿಜೆಪಿ, ಆರ್.ಎಸ್.ಎಸ್ ರಾಜಕೀಯದ ಶೈಲಿ ಎಂದ ರಾಹುಲ್

ತಮ್ಮ ಬೆಂಗಾವಲು ವಾಹನದ ಮೇಲೆ ಗುಜರಾತ್ ನಲ್ಲಿ ನಡೆದ ಕಲ್ಲು ತೂರಾಟಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರಣ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತನೊಬ್ಬ ಎಸೆದ ದೊಡ್ಡ ಕಲ್ಲು ನನ್ನ ಭದ್ರತಾ ಅಧಿಕಾರಿಗೆ ತಗುಲಿದೆ. ಇದು ಬಿಜೆಪಿ ಮತ್ತು ಆರ್.ಎಸ್.ಎಸ್ ರಾಜಕೀಯನ್ನು ಶೈಲಿ ತೋರಿಸುತ್ತದೆ ಎಂದರು.

ಶುಕ್ರವಾರ ಗುಜರಾತಿನ ಬನಸ್ಕಾಂತಾ ಜಿಲ್ಲೆಯಲ್ಲಿನ ಪ್ರವಾಹ ಪೀಡಿದ ಪ್ರದೇಶಗಳ ಭೇಟಿಗೆ ಹೊರಟಿದ್ದ ರಾಹುಲ್ ಗಾಂಧಿ, ಧನೇರಾದಲ್ಲಿನ ಲಾಲ್ ಚೌಕದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ರಾಹುಲ್ ಆಗಮನವನ್ನು ವಿರೋಧಿಸಿ ಜನರು ಕಪ್ಪು ಬಾವುಟ ಪ್ರದರ್ಶಿಸಿದರು. ಕೆಲವರು ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕಾರಿನ ಗಾಜುಗಳ ಜಖಂಗೊಂಡಿದ್ದವು. ರಾಹುಲ್ ಕೂತಿದ್ದ ಕಾರಿನ ಕನ್ನಡಿಯೂ ಕಲ್ಲಿನ ಹೊಡೆತಕ್ಕೆ ಪುಡಿಪುಡಿಯಾಗಿತ್ತು.

ಘಟನೆ ನಂತರ ರಾಹುಲ್ ಗಾಂಧಿ ಕಾರಿನತ್ತ ಕಲ್ಲು ತೂರಿದ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂದು ಬನಸ್ಕಾಂತ ಎಸ್ಪಿ ನೀರಜ್ ಬದ್ಗುಜರ್ ಹೇಳಿದ್ದಾರೆ.

ರಾಹುಲ್ ಕಾರಿನ ಮೇಲೆ ಕಲ್ಲಿನಿಂದ ದಾಳಿ, ಕಪ್ಪು ಬಾವುಟ ಪ್ರದರ್ಶನ

ಭದ್ರತೆಯ ಬುಲೆಟ್ ಪ್ರೂಫ್ ಕಾರಿನಲ್ಲಿ ತೆರಳುವಂತೆ ಪೊಲೀಸರು, ಬೆಂಗಾವಲು ಪಡೆ ರಾಹುಲ್ ಗಾಂಧಿ ಹಲವು ಬಾರಿ ಸೂಚಿಸಿದ್ದರು. ಆದರೆ ಪಕ್ಷ ನೀಡಿದ ಕಾರಿನಲ್ಲಿಯೇ ತೆರಳಿದ ರಾಹುಲ್ ಗಾಂಧಿ, ಸೂಕ್ಷ್ಮ ಪ್ರದೇಶಗಳಲ್ಲಿ ಅಲ್ಲಲ್ಲಿ ನಿಲ್ಲಿಸಿ ಮುಂದುವರೆಯುತ್ತಿದ್ದರು ಎಂದು ಎಸ್ಪಿ ಹೇಳಿದ್ದಾರೆ. ಹೋಗುವ ದಾರಿಯಲ್ಲಿ ಅಪರಿಚರೊಂದಿಗೆ ರಾಹುಲ್ ಭೇಟಿ ಮಾಡಿದರು ಎಂದು ಎಸ್ಪಿ ಹೇಳಿದ್ದಾರೆ. ಕಲ್ಲು ತೂರಾಟದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಹತನಾದ ಉಗ್ರ ದುಜಾನಾ ಮತ್ತು ಸೇನಾಧಿಕಾರಿ ನಡುವಿನ ಸಂಭಾಷಣೆ

Contact for any Electrical Works across Bengaluru

Loading...
error: Content is protected !!