ಭಾರತಕ್ಕೆ ಆಗಮಿಸಲಿರುವ ಟ್ರಂಪ್ ಪುತ್ರಿ ಇವಾಂಕಾ – News Mirchi

ಭಾರತಕ್ಕೆ ಆಗಮಿಸಲಿರುವ ಟ್ರಂಪ್ ಪುತ್ರಿ ಇವಾಂಕಾ

ಭಾರತದಲ್ಲಿ ನವೆಂಬರ್ 28 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮಿಗಳ ಶೃಂಗಸಭೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಇವಾಂಕಾ ಟ್ರಂಪ್ ಆಗಮಿಸಲಿದ್ದಾರೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಅಮೆರಿಕದ ನಿಯೋಗಕ್ಕೆ ಇವಾಂಕಾ ನೇತೃತ್ವ ವಹಿಸಲಿದ್ದಾರೆ.

ಇವಾಂಕಾ ಆಗಮನವನ್ನು ಗುರುವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ವೇತಭವನಕ್ಕೆ ಭೇಟಿ ನೀಡಿದ್ದಾಗ ಇವಾಂಕಾ ಟ್ರಂಪ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದ್ದರು.

ವಿಶ್ವಾದ್ಯಂತ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಸಲುವಾಗಿ ನವೆಂಬರ್ ನಲ್ಲಿ 28 ರಿಂದ 30 ರವರೆಗೆ ನಡೆಯುವ ಶೃಂಗಸಭೆಯಲ್ಲಿ ಪುತ್ರಿ ಇವಾಂಕಾ ಪಾಲ್ಗೊಳ್ಳಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತದಲ್ಲಿನ ವಾಣಿಜ್ಯೋದ್ಯಮಿಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಾತರಳಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಹೆಮ್ಮೆಯೆನಿಸುತ್ತಿದೆ ಎಂದು ಇವಾಂಕಾ ಹೇಳಿದ್ದಾರೆ.

ತಂದೆಯ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆಂದು ಈ ಹಿಂದೆ ಇವಾಂಕಾ ಟ್ರಂಪ್ ಅವರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಜುಲೈನಲ್ಲಿ ಜಿ20 ಶೃಂಗಸಭೆಯಲ್ಲಿ ತಂದೆಯ ಪಕ್ಕ ಕೂತು ವ್ಯಾಪಕ ಟೀಕೆಗೆ ಒಳಗಾಗಿದ್ದರು.

Loading...